Select Your Language

Notifications

webdunia
webdunia
webdunia
webdunia

Video, ಚಲಾಯಿಸುತ್ತಿರುವಾಗಲೇ ಶಾಲಾ ಮಕ್ಕಳಿಂದ ಓಮ್ನಿ ಬಾಗಿಲು ಓಪನ್‌, ಹಿಂಬದಿಯಲ್ಲಿ ಕೂತಿದ್ದ ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದೆ ಹೆಚ್ಚು

Begaluru Omni Viral Video
Photo Courtesy X
ಬೆಂಗಳೂರು: ಬೆಳಗ್ಗೆ ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಓಮ್ನಿ ವಾಹನದಿಂದ ನಾಲ್ಕು ಮಕ್ಕಳು ಬಾಗಿಲು ಓಪನ್ ಆಗಿ ಹೊರಗೆ ಬಿದ್ದಿರುವ ಆಘಾತಕಾರಿ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಬೆಂಗಳೂರಿನ ಕೆಆರ್‌ ಪುರಂನಲ್ಲಿ ನಡೆದಿದೆ.

ಒಳ ಮಾರ್ಗದಲ್ಲಿ ಮಕ್ಕಳಿದ್ದ ವಾಹನದ ಹಿಂದಿನ ಬಾಗಲಿ ದಿಢೀರನೆ ಓಪನ್ ಆಗಿದೆ. ಈ ವೇಳೆ ಹಿಂಬದಿಯಲ್ಲಿ ಕೂತಿದ್ದ ನಾಲ್ಕು ಮಕ್ಕಳು ಕೆಳಗೆ ಬಿದ್ದಿದ್ದಾರೆ. 

ಅದೃಷ್ಟವಶಾತ್ ಹಿಂಬದಿಯಲ್ಲಿ ಯಾವುದೇ ವಾಹನ ಬಾರದಿದ್ದರಿಂದ ದೊಡ್ಡ ಅವಘಡ ತಪ್ಪಿದೆ.  ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಬರಿಯಿಂದ ಜೋರಾಗಿ ಅಳಲು ಶುರು ಮಾಡಿದ್ದಾರೆ. 

ಈ ದೃಶ್ಯ ಅಲ್ಲಿನ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಾಹನ ಸವಾರರು ತುಂಬಾ ಎಚ್ಚರಿಕೆಯನ್ನು ವಹಿಸಬೇಕಾಗಿದೆ. 



Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಮೆಟ್ರೊ ಕಾಮಗಾರಿ ವೇಳೆ ಇದೆಂಥಾ ಅವಘಡ, ವಿದ್ಯುತ್ ಸ್ಪರ್ಶಕ್ಕೆ ಕಾರ್ಮಿಕ ಬಲಿ