Daily Horoscope

Select Your Language

Notifications

webdunia
webdunia
webdunia
webdunia

ಕೆಆರ್‌ ಪುರಂ ತ್ರಿವಳಿ ಮರ್ಡರ್ ಕೇಸ್‌: ಶ್ವೇತಾಳ ಲವರ್‌, ಪ್ರಮುಖ ಆರೋಪಿ ಸಿಕ್ಕಿದ್ದೆಲ್ಲಿ ಗೊತ್ತಾ

KR Puram Murder Case
Photo Courtesy X
ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಬೆಂಗಳೂರಿನ ಕೆ.ಆರ್. ಪುರಂನಲ್ಲಿ ನಡೆದ ತ್ರಿವಳಿ ಮರ್ಡರ್ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಶ್ವೇತಾಳ ಪ್ರಿಯಕರ ಕೆನತ್‌ನನ್ನು ವೈಟ್‌ಫೀಲ್ಡ್ ಉಪವಿಭಾಗದ ಪೊಲೀಸರು ಇಂದು ಅರೆಸ್ಟ್ ಮಾಡಿದ್ದಾರೆ. 

ನಾಲ್ಕು ದಿನಗಳ ತೀವ್ರ ಹುಡುಕಾಟದ ನಂತರ ಕೆನತ್‌ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಶ್ವೇತಾಳನ್ನು ಬಂಧಿಸಿದ್ದ ಪುದುಚೇರಿಯಲ್ಲೇ ಇದೀಗ ಪ್ರಿಯಕರನನ್ನು ಅರೆಸ್ಟ್ ಮಾಡಲಾಗಿದೆ. 

ಇನ್ನೂ ಪೊಲೀಸರಿಗೆ ಸಿಗಬಾರದೆಂದು ಹೊಟೇಲ್‌ನಲ್ಲಿ ಉಳಿದರೆ ಐಡಿ ಕಾರ್ಡ್  ಕೇಳುತ್ತಾರೆಂದು ಕೆನತ್, ಪುದುಚೇರಿಯ ಕಡಲತೀರದ ಗುಡಿಸಲುಗಳಲ್ಲಿ ಆಶ್ರಯ ಪಡೆದಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ತಕ್ಷಣ ಇಬ್ಬರೂ ಆರೋಪಿಗಳ ಚಲನವಲನ ಪತ್ತೆಹಚ್ಚಲು ಹಲವು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಒಂದು ತಂಡವು ಶ್ವೇತಾಳನ್ನು ಹಿಂಬಾಲಿಸಿದರೆ, ಇತರ ತಂಡಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕೆನತ್‌ಗಾಗಿ ಹುಡುಕಾಟ ನಡೆಸಿದ್ದವು.

ಕೆನತ್‌ ತವರೂರಾದ ‌ತಮಿಳುನಾಡಿನ ತಿರುಚಿರಾಪಳ್ಳಿಯ ಆಪ್ತರ ಮನೆನೆಯಲ್ಲಿ ನೆರವು ಪಡೆಯಬಹುದೆಂಬ ಉದ್ದೇಶದಿಂದ ಪೊಲೀಸರು ತಮಿಳುನಾಡು ಹಾಗೂ ಪುದುಚೇರಿಯ ವಿವಿಧೆಡೆ ರಹಸ್ಯವಾಗಿ ತಂಡಗಳನ್ನು ನಿಯೋಜಿಸಿದ್ದರು. 

ಬೆಳ್ಳಂದೂರಿನಿಂದ ಪುದುಚೇರಿಯವರೆಗೆ ಸುಮಾರು 300 ಕಿಲೋಮೀಟರ್ ದೂರ ಬೈಕ್‌ನಲ್ಲೇ ಸಾಗಿದ್ದ ಈ ಜೋಡಿಯ ಅದೃಷ್ಟ ಪುದುಚೇರಿ ತಲುಪುತ್ತಿದ್ದಂತೆ ಕೈಕೊಟ್ಟಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ ರಾಮನ ದುಡ್ಡಿಗೆ ಕನ್ನ ಹಾಕಿದವರು ಸಿಕ್ಕಿಬಿದ್ದಿದ್ದು ಹೇಗೆ ಇಲ್ಲಿದೆ ರೋಚಕ ವಿವರ