Select Your Language

Notifications

webdunia
webdunia
webdunia
webdunia

ಅಕ್ರಮ ಸಂಬಂಧ ಆರೋಪ: ಚಾಕುವಿನಿಂದ ಇರಿದು ವ್ಯಕ್ತಿಯ ಮರ್ಡರ್

Bengaluru Crime Case
ಬೆಂಗಳೂರು: ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜೆಜೆ ನಗರದಲ್ಲಿ ನಡೆದಿದೆ.  

ಅಕ್ರಂ ಪಾಷಾ (43) ಕೊಲೆಯಾದ ವ್ಯಕ್ತಿ. ಉಮರ್ ಖಾಲೀದ್ ಎಂಬವರ ಪತ್ನಿಯ ಜೊತೆ ಅಕ್ರಂನ ಪಾಷಾ ಅಕ್ರಮ ಸಂಬಂಧ ಹೊಂದಿದ್ದ ಎಂದು ಆರೋಪವಿದೆ.ಬುಧವಾರ ರಾತ್ರಿ ಅಕ್ರಂ ಪಾಷಾ ಉಮರ್ ಖಾಲಿದ್ ಮನೆ ಬಳಿ ಬಂದಿದ್ದ. ಈ ವೇಳೆ ಉಮರ್ ಖಾಲಿದ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇನ್ನು ಕೊಲೆ ಪ್ರಕರಣ ಸಂಬಂಧ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್ ಪ್ರತಿಕ್ರಿಯಿಸಿ, ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುಮಾರು 12:30ಕ್ಕೆ ಹಲ್ಲೆ ಆಗಿದೆ ಎಂದು ಮಾಹಿತಿ ಬಂದಿದೆ. ಮಾಹಿತಿ ಆಧರಿಸಿ ಪೊಲೀಸ್ ಹೋಗಿ ನೋಡಿದಾಗ ಓರ್ವ ವ್ಯಕ್ತಿ ಮೇಲೆ ಹಲ್ಲೆ ಆಗಿರುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಕ್ರಂ ಪಾಷಾ ಸಾವನ್ನಪ್ಪಿರುವುದಾಗಿ ಮಾಹಿತಿ ನೀಡಿದರು. 

ಅಕ್ರಂ ಪಾಷಾ ಹಾಗೂ ಉಮರ್ ಖಾಲಿದ್ ಕಾರು ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಕ್ರಮ ಸಂಬಂಧ ವಿಚಾರವಾಗಿ ಆರೋಪಿ ಅಕ್ರಂ ಪಾಷಾ ಮೇಲೆ ಹಲ್ಲೆ ಮಾಡಿದ್ದ. ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಪತ್ರಿಕಾಗೋಷ್ಠಿ ಕರೆದ ಕೆ ಅಣ್ಣಾಮಲೈ, ರಾಜಕೀಯದಲ್ಲಿ ಹೊಸ ಅಧ್ಯಾಯ ಸಾಧ್ಯತೆ