Select Your Language

Notifications

webdunia
webdunia
webdunia
webdunia

ಮದುವೆಯಾಗಿ ವರ್ಷ ತುಂಬುತ್ತಾ ಬಂದರೂ ನಿಲ್ಲದ ವರದಕ್ಷಿಣೆ ಕಿರುಕುಳ, ನೇಣಿಗೆ ಕೊರಳೊಡ್ಡಿದ ಮಹಿಳೆ

Bengaluru Crime Case
ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿ ವರದಿಯಾಗಿದೆ. 

ಮೃತ ಮಹಿಳೆಯನ್ನು ಶಾರದಾ (39) ಎಂದು ಗುರುತಿಸಲಾಗಿದ್ದು, ಮಂಗಳವಾರ ರಾತ್ರಿನ ತಮ್ಮ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಆರೋಪ ಸಂಬಂಧ ಪತಿ ಮಹೇಶ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

2025ರಲ್ಲಿ ಶಾರದಾ ಮತ್ತು ಮಹೇಶ್ ಅವರ ವಿವಾಹವಾಗಿತ್ತು. ವಿವಾಹದ ನಂತರ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಕಿರುಕುಳ ಹಿನ್ನೆಲೆಯಲ್ಲಿ ಶಾರದಾ ಅವರು ತಮ್ಮ ಫಿಕ್ಸ್ಡ್ ಡಿಪಾಸಿಟ್‌ನಿಂದ ಪತಿಗೆ ₹2 ಲಕ್ಷ ನೀಡಿದ್ದರು ಎಂದು ತಿಳಿದುಬಂದಿದೆ.

ಮೃತಳ ಸಹೋದರ ಅರುಣ್ ಅವರು ಮಾತನಾಡಿ, ಶಾರದಾ ಒಟ್ಟು ಸುಮಾರು ₹5 ಲಕ್ಷ ಹಣವನ್ನು ಪತಿಗೆ ನೀಡಿದ್ದರು. ಆತ್ಮಹತ್ಯೆಗೆ ಶರಣಾಗುವ ಮುನ್ನಾ ಪತಿಗೆ ಹಲವಾರು ಬಾರಿ ಕರೆ ಮಾಡಿದ್ದಾಳೆ. ಆದರೆ ಆತ ಮನೆಯಲ್ಲಿದ್ದರೂ ಕರೆಗೆ ಉತ್ತರಿಸಲಿರಲಿಲ್ಲ. ಬಳಿಕ ಶಾರದಾ ಫೋಟೋಗಳ ಮೂಲಕ ಆತ್ಮಹತ್ಯೆ ಸೂಚನೆ ನೀಡಿದರೂ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ಆತ್ಮಹತ್ಯೆಗೆ ಶರಣಾಳಾಗಿದ್ದಾಳೆಂದು ಹೇಳಿದ್ದಾರೆ.

ಏತನ್ಮಧ್ಯೆ ಮೃತ ಮಹಿಳೆಯ ಕುಟುಂಬಸ್ಥರು ಗೃಹ ಸಚಿವ ಪರಮೇಶ್ವರನ್ನು ಅವರನ್ನು ಭೇಟಿ ಮಾಡಿ, ಸರಿಯಾದ ತನಿಖೆ ನಡೆಯುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪ್ರಕರಣ ಕುರಿತು ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯಿಸಿ, ಮಹಿಳೆಯ ಪತಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಆತನ ತಾಯಿ ಪಾತ್ರದ ಕುರಿತಂತೆಯೂ ತನಿಖೆ ನಡೆಸುತ್ತಿದ್ದೇವೆ. ಶಾರದಾ ಅವರ ಡೈರಿ ವಶಪಡಿಸಿಕೊಳ್ಳಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ವಿರುದ್ಧ ವರದಕ್ಷಿಣೆ ಕಿರುಕುಳ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ರಾಜಕೀಯ ಸಂಚಲನ: ಡಿಎಂಕೆ-ಎಐಎಡಿಎಂಕೆ ಮೈತ್ರಿ ವದಂತಿ ಮತ್ತು ಬಿಜೆಪಿಯ ಸ್ಪಷ್ಟ ನಿಲುವು