Publish Date: Thu, 26 Mar 2026 (14:39 IST)
Updated Date: Thu, 26 Mar 2026 (14:41 IST)
ಬೆಂಗಳೂರು: ಅಪ್ರಾಪ್ತನೊಬ್ಬ ಡಬಲ್ ಮರ್ಡರ್ ಮಾಡಿರುವ ಆಘಾತಕಾರಿ ರಾಜ್ಯ ರಾಜದಾನಿ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಇನ್ನೂ ಅಪ್ರಾಪ್ತನಿಂದ ಕೊಲೆಯಾದವರನ್ನು ಮಯುನಾ(36) ಹಾಗೂ ಆಕೆಯ ಸಹೋದರ(34) ಎಂದು ಗುರುತಿಸಲಾಗಿದೆ.
ಹತ್ಯೆಗೊಳಗಾದ ಯಮುನಾ ಗಂಡ ಮಲ್ಲೇಗೌಡ ಎಂಬಾತ ಆರೋಪಿ ಅಪ್ರಾಪ್ತನ ತಾಯಿ ಛಾಯಾಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಈ ವಿಚಾರ ಕೇಳಲೆಂದು ಯಮುನಾ ಹಾಗೂ ಸಹೋದರ ಸುದೀಪ್ ಛಾಯಾ ಮನೆ ಬಳಿ ಹೋಗಿದ್ದರು. ಅಕ್ರಮ ಸಂಬಂಧ ವಿಚಾರ ಪ್ರಸ್ತಾಪಿಸುತ್ತಿದ್ದಾಗ ವಾಗ್ವಾದ ಶುರುವಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲೇ ಇದ್ದ ಛಾಯಾಳ ಮಗ ಇಬ್ಬರ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದಾನೆ.
ಗಂಭೀರ ದಾಳಿಯಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಸದ್ಯ ಪೀಣ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.