Publish Date: Mon, 02 Mar 2026 (17:37 IST)
Updated Date: Mon, 02 Mar 2026 (17:40 IST)
ಬೆಂಗಳೂರು: ಪತಿಯೇ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೀಲಲಿಗೆಯಲ್ಲಿ ನಡೆದಿದೆ.
ಮೃತ ದಂಪತಿಗಳನ್ನು ಒಡಿಶಾ ಮೂಲದ ಮಂಜುಳಾ ಮತ್ತು ದೀಪಂತ್ ಎಂದು ತಿಳಿದುಬಂದಿದೆ.
ಬೊಮ್ಮಸಂದ್ರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ದಂಪತಿ, ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಈ ವೇಳೆ ಕೋಪಗೊಂಡ ದೀಪಂತ್, ಮಂಜುಳ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ.
ಗಂಭೀರ ಹಲ್ಲೆಯಿಂದಾಗಿ ಮಂಜುಳಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಇನ್ನು ಪತ್ನಿ ಸಾವನ್ನಪ್ಪಿದ ಬಳಿಕ ದೀಪಂತ್ ಆಕೆಯ ಮೃತದೇಹದ ಎದುರು ಕಣ್ಣೀರು ಹಾಕಿದ್ದಾನೆ. ಅಲ್ಲದೆ ಪತ್ನಿಯ ಹಣೆಗೆ ಸಿಂಧೂರವಿಟ್ಟು ಡೆತ್‌ನೋಟ್ ಬರೆದು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.