Publish Date: Sun, 19 Apr 2026 (12:15 IST)
Updated Date: Sun, 19 Apr 2026 (12:18 IST)
ಮೈಸೂರು: ತನ್ನ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾದನೆಂದು ಆತನನ್ನೇ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ನಡೆದಿದೆ.
ಪತ್ನಿಯಿಂದಲೇ ಕೊಲೆಯಾದ ಪತಿಯನ್ನು ಕುರ್ಣೇಗಾಲದ ಜವರಪ್ಪ ಎಂದು ಗುರುತಿಸಲಾಗಿದೆ. ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32), ಕುರ್ಣೆಗಾಲ ಗ್ರಾಮದ ಅಮೃತಾ (26) ಬಂಧಿತ ಆರೋಪಿಗಳು.
ಅನುಮಾನಸ್ಪದ ರೀತಿಯಲ್ಲಿ ಜವರಪ್ಪ ಶವ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ.
ಕೊಲೆ ಆರೋಪಿ ಸಿದ್ದೇಶ್ ಮೃತನ ಪತ್ನಿ ಅಮೃತಾ ಜತೆಗೆ ಅಕ್ರಮ ಸಂಬಂಧವಿತ್ತು. ತಮ್ಮಿಬ್ಬರ ಸಂಬಂಧಕ್ಕೆ ಪತಿ ಅಡ್ಡಿಯಾದನೆಂದು ಗಂಡನ ಕೊಲೆ ಪ್ಲ್ಯಾನ್ ಮಾಡಿದ್ದಾನೆ.
ಕುರ್ಣೇಗಾಲ ಗ್ರಾಮದ ಜವರಪ್ಪ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಅಮೃತಾಳನ್ನ ವಿವಾಹವಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸಣ್ಣಪುಟ್ಟ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಗಲಾಟೆ ಆಗುತ್ತಿತ್ತು.
12 ದಿನಗಳ ಹಿಂದೆ ಮಕ್ಕಳೊಂದಿಗೆ ಹಬ್ಬಕ್ಕೆಂದು ಅಮೃತ ತವರಿಗೆ ಹೋಗಿದ್ದಳು. ಏ.16 ರಂದು ಹೆಂಡತಿ ಮನೆಗೆ ಹೋಗಿ ಬರುತ್ತೇನೆಂದು ಜವರಪ್ಪ ಹೋಗಿದ್ದ. ಅಲ್ಲಿಯೆ ಈ ಕೊಲೆ ನಡೆದಿದೆ. ಕೊಲೆ ಮಾಡಿ ಗ್ರಾಮದ ಸಮೀಪದ ರಸ್ತೆ ಬದಿಯಲ್ಲಿ ಮೃತದೇಹ ಬಿಸಾಕಿದ್ದರು.