Select Your Language

Notifications

webdunia
webdunia
webdunia
webdunia

ವಿಧ್ಯುಕ್ತವಾಗಿ ದಸರಾಗೆ ಚಾಲನೆ ಸಿಕ್ಕ ಮರುದಿನವೇ ಚಾಮುಂಡಿಬೆಟ್ಟದಲ್ಲಿ ಸೂತಕದ ಛಾಯೆ, ಏನಾಯಿತು ಗೊತ್ತಾ

ಮೈಸೂರು ದಸರಾ 2025

Sampriya

ಮೈಸೂರು , ಮಂಗಳವಾರ, 23 ಸೆಪ್ಟಂಬರ್ 2025 (15:54 IST)
Photo Credit X
ಮೈಸೂರು: ಹಲವು ವಿವಾದಗಳ ನಡುವೆ ಮೈಸೂರು ದಸರಾಗೆ ಸಾಹಿತಿ ಬಾನು ಮುಷ್ತಾಕ್ ಅವರು ಉದ್ಘಾಟನೆ ನೀಡಿದ್ದರು.  ಎಲ್ಲ ಅಡೆತಡೆಗಳು ಮೀರಿ ದಸರಾಗೆ ವಿಧ್ಯುಕ್ತ ಚಾಕನೆ ನೀಡಿದ್ದರು, ಇದೀಗ ಚಾಮುಂಡಿ ಬೆಟ್ಟದಲ್ಲಿ ಸೂತಕದ ಛಾಯೆ ಆವರಿಸಿದೆ. 

ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದ ಅರ್ಚಕ ರಾಜು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 

ಅರ್ಚಕ ರಾಜು ನಿಧನದ ಕಾರಣ ಸದ್ಯ ಚಾಮುಂಡೇಶ್ವರಿ ದೇಗುಲದ ಗರ್ಭಗುಡಿಗೆ ತೆರೆ ಎಳೆಯಲಾಗಿದೆ. ರಾತ್ರಿ ವರೆಗೂ ಉತ್ಸವಮೂರ್ತಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಇಂದು ರಾತ್ರಿವರೆಗೂ ಮೂಲ ವಿಗ್ರಹದ ದರ್ಶನ ಇರುವುದಿಲ್ಲ. 

ಅರ್ಚಕನ ನಿಧನದಿಂದಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಡಕಾಗಿದೆ. ಆದರೆ ದಸರಾ ಉತ್ಸವಕ್ಕೆ ಇದು ಯಾವುದೇ ಅಡಚಣೆ ಆಗುವುದಿಲ್ಲ.

ಕೆಲವು ವಿಧಿವಿಧಾನಗಳ ನಂತರ ಗರ್ಭಗುಡಿ ಬಾಗಿಲು ತೆರೆಯಲಿದೆ. ನವರಾತ್ರಿ ಪೂಜೆಗಳು ಮಾಮೂಲಿಯಂತೆಯೇ ನಡೆಯಲಿವೆ ಎಂದು ದೇಗುಲದ ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಹಿಂದೂ ಹಬ್ಬಗಳು ತೊಂದರೆ ಎದುರಿಸುತ್ತಿರುವುದನ್ನು ಗಮನಿಸಿದ್ದೇನೆ: ದೆಹಲಿ ಸಿಎಂ