ಬೆಂಗಳೂರು: ದಸರಾ ಉದ್ಘಾಟನೆಯನ್ನು ಬಾನು ಮುಷ್ತಾಕ್ ಅವರಿಂದ ಮಾಡುವ ಮೂಲಕ ನಮ್ಮ ಸರ್ಕಾರ ಜಾತ್ಯಾತೀತ ಸರ್ಕಾರ ಎಂದು ತೋರಿಸಿದೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ಬಿಜೆಪಿ ವಿರೋಧಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ದಸರಾ ನಮ್ಮ ನಾಡಹಬ್ಬ ಅದನ್ನು ನಮ್ಮ ಕನ್ನಡದ ಹೆಣ್ಣು ಮಗಳು ಬಾನು ಮುಷ್ತಾಕ್ ಉದ್ಘಾಟಿಸಿದ್ದಾರೆ. ಅವರಿಗೆ ಕನ್ನಡದ ಮೇಲೆ ಪ್ರೀತಿ ಇಲ್ಲದೇ ಹೋಗಿದ್ರೆ ಎದೆಯ ಅಣತೆ ಪುಸ್ತಕವನ್ನು ಕನ್ನಡದಲ್ಲಿ ಬರೆಯದೇ ಉರ್ದುನಲ್ಲಿ ಬರೆಯುತ್ತಿದ್ದರು. ನಮ್ಮ ಸರ್ಕಾರ ಅವರಿಗೆ ಗೌರವ ನೀಡಿದೆ. ಇದು ನಿಜವಾಗಿಯೂ ಜಾತ್ಯಾತೀತಕ್ಕೆ ಕೊಡ್ತೀರೋ ಗೌರವ ಎಂದು ಹೇಳಿದರು.
ಹಿಂದೆ ರಾಜರು ಮಿರ್ಜಾ ಇಸ್ಮಾಯಿಲ್ ಅವರನ್ನ ಕೂರಿಸಿಕೊಂಡು ದಸರಾ ಮಾಡಿದ್ದಾರೆ. ಬಾನು ಮುಷ್ತಾಕ್ ಉದ್ಘಾಟನೆ ಮಾಡಬಾರದು ಅಂತ ಹೈಕೋರ್ಟ್, ಸುಪ್ರೀಂಕೋರ್ಟ್‌ಗೆ ಹೋಗಿದ್ರು, ಬಿಜೆಪಿಯವರಿಗೆ ಮುಖಭಂಗ ಆಯ್ತು. ಸಂವಿಧಾನದ ಪ್ರಕಾರವೇ ನಾವು ಮಾಡಿದ್ದೇವೆ ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.