Select Your Language

Notifications

webdunia
webdunia
webdunia
webdunia

ಬಾನು ಮುಪ್ತಾಕ್ ಮುಸ್ಲಿಂ ಧರ್ಮದಲಿಲ್ಲ ಎಂದು ಘೋಷಿಸಲಿ: ಬಸನಗೌಡ ಪಾಟೀಲ್

ಕವಯಿತ್ರಿ ಬಾನು ಮುಸ್ತಾಕ್

Sampriya

ಮೈಸೂರು , ಶುಕ್ರವಾರ, 12 ಸೆಪ್ಟಂಬರ್ 2025 (16:44 IST)
ಮೈಸೂರು: ಇಸ್ಲಾಂ ಪ್ರಕಾರ ಮೂರ್ತಿ ಪೂಜೆ ಮಾಡುವವರು ಕಾಫೀರರು. ಮೂರ್ತಿ ಪೂಜೆ ಮಾಡುವವರನ್ನು ಕೊಲ್ಲಿ ಎಂದು ಇಸ್ಲಾಮ್ ಹೇಳುತ್ತದೆ. ಚಾಮುಂಡೇಶ್ವರಿ ಪೂಜೆಗೆ ಮುಂದಾಗಿರುವ ಬಾನು ಮುಷ್ತಾಕ್ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಂದರು. 

ದಸರಾ ಉದ್ಘಾಟನೆಯಿಂದ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಹಿಂದೆ ಸರಿಯಬೇಕೆಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ. 

ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯತ್ನಾಳ್ ಅವರು, ಇಸ್ಲಾಂ ಪ್ರಕಾರ ಮೂರ್ತಿ ಪೂಜೆ ಮಾಡುವವರು ಕಾಫೀರರು. ಮೂರ್ತಿ ಪೂಜೆ ಮಾಡುವವರನ್ನು ಕೊಲ್ಲಿ ಎಂದು ಇಸ್ಲಾಮ್ ಹೇಳುತ್ತದೆ. ಈಗ ಬಾನು ಮುಷ್ತಾಕ್ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಲು ಮುಂದಾಗಿದ್ದಾರೆ. ಮೌಲ್ವಿಗಳು ಈ ಬಗ್ಗೆ ಮಾತನಾಡಬೇಕು. ಮೂರ್ತಿ ಪೂಜೆಗೆ ಬರುತ್ತಿರುವ ಬಾನು ಮುಷ್ತಾಕ್ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಾ? ಮೌಲ್ವಿಗಳು ಈ ಬಗ್ಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬಾನು ಮುಪ್ತಾಕ್ ಮುಸ್ಲಿಂ ಧರ್ಮದಲಿಲ್ಲ ಎಂದಾದರೂ ಘೋಷಿಸಬೇಕು. ಇಸ್ಲಾಂ ಬಗ್ಗೆ ನನಗೆ ನಂಬಿಕೆ ಇಲ್ಲವೆಂದು ತಿಳಿಸಿ ಉದ್ಘಾಟಿಸಲಿ. ಇಲ್ಲವೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರವೇ ಉದ್ಘಾಟಿಸಲಿ ಎಂದು ಒತ್ತಾಯಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ವಿಚಾರವಾಗಿ ಮತ್ತೊಂದು ವಿಡಿಯೋ ಹಂಚಿಕೊಂಡ ಯೂಟ್ಯೂಬರ್‌ ಸಮೀರ್‌