ಮಂಗಳೂರು: ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣ ಹಾಗೂ ಅನನ್ಯಾ ಭಟ್ ನಾಪತ್ತೆ ವಿಚಾರವಾಗಿ ಎಐ ವಿಡಿಯೋ ಮಾಡಿ ಸದ್ದು ಮಾಡಿದ್ದ ಯೂಟ್ಯೂಬರ್ ಸಮೀರ್ ಇದೀಗ ಮತ್ತೊಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಧರ್ಮಸ್ಥಳದ ವಿರುದ್ಧ ಮಾತನಾಡಿದ ಸಮೀರ್‌ಗೆ ಇಸ್ಲಾಂಮಿಕ್ ದೇಶದಿಂದ ಫಂಡಿಂಗ್ ನಡೆದಿದೆ ಎಂದು ಗಂಭೀರ ಆರೋಪ ಕೇಳಿಬಂದಿತ್ತು.
ಈ ವಿಚಾರವಾಗಿ ಸಮೀರ್ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ನನಗೆ ಯಾವುದೇ ದೇಶದಿಂದಲೂ ಹಣ ಬಂದಿಲ್ಲ. ತನಿಖೆ ಸಂಬಂಧ ನನ್ನ ಎಲ್ಲ ದಾಖಲೆಯನ್ನು ಎಸ್‌ಐಟಿಗೆ ನೀಡಿದ್ದೇನೆ. ಅದರಲ್ಲಿ ಎಲ್ಲ ತಿಳಿಯುತ್ತದೆ. ಯೂಟ್ಯೂಬ್ ವಿಚಾರವಾಗಿ ಕೆಲ ಪ್ರಮೋಷನನ್ ವಿಡಿಯೋ ಮಾಡಿದ್ದೇನೆ. ದುಡ್ಡು ಬಂದಿದ್ರೆ ತನಿಖೆಯಲ್ಲಿ ಹೊರಬರಬೇಕಿತ್ತು ಅಲ್ವಾ ಎಂದಿದ್ದಾರೆ.
ಇನ್ನೂ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗ ಅಸಹಜ ಸಾವು ಪ್ರಕರಣ ಸಂಬಂಧ ಉಲ್ಲೇಖಿಸಿದ ಸಮೀರ್, ಈ ಹಿಂದೆ ಧರ್ಮಸ್ಥಳದ ಸುತ್ತಾ ಮುತ್ತಾ ಸಂಭವಿಸಿದ ಅಸಹಜ ಸಾವು ಸಂಬಂಧ ಪ್ರಕಟವಾದ ವರದಿಗಳು ಸುಳ್ಳಾ ಎಂದು ಕೆಲ ದಾಖಲೆಗಳನ್ನು ತೋರಿಸಿದ್ದಾರೆ.