ಬೆಂಗಳೂರು: ಸರ್ಕಾರದ ಮೂರ್ಖತನದಿಂದ ಅದ್ಯಾವನೋ ಅನಾಮಿಕನ ಮಾತು ಕೇಳಿಕೊಂಡು ಪುಣ್ಯ ಭೂಮಿ ಧರ್ಮಸ್ಥಳದಲ್ಲಿ ಸಿಕ್ಕಸಿಕ್ಕಲ್ಲಿ ಮಣ್ಣನ್ನು ಅಗೆಯಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದರು.
ವಿಧಾನಸಭೆಯಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಧ್ವನಿ ಎತ್ತಿದ ಆರ್ ಅಶೋಕ್ ಅವರು, ಅದ್ಯಾವನೋ ಅನಾಮಿಕನ ಮಾತು ಕೇಳಿಕೊಂಡು ಎಡಪಂಥೀಯರ ಕುಮ್ಮಕ್ಕಿನಿಂದ 20 ವರ್ಷ ಹಿಂದೆ ಹೂಳಲಾಗಿದೆ ಎನ್ನುವ ಶವಗಳನ್ನು ಪತ್ತೆಮಾಡಲು ದಿನಕ್ಕೊಂದು ಕಡೆ ಸಿಕ್ಕಸಿಕ್ಕ ಜಾಗದಲ್ಲಿ 20 ಅಡಿ ಅಗೆಯುತ್ತಿರುವ ಸರ್ಕಾರದ ಮೂರ್ಖತನಕ್ಕೆ ಏನು ಹೇಳೋಣ ಎಂದು ಪ್ರಶ್ನೆ ಮಾಡಿದರು.
ಆರೋಪ ಮಾಡುತ್ತಿರುವ ಅನಾಮಿಕ ವ್ಯಕ್ತಿಯ ಗುರುತು ಬಹಿರಂಗವಾಗಲಿ. ಅವನು ತೋರಿಸಿದ ಕಡೆಯೆಲ್ಲೆಲ್ಲಾ ಮೂರ್ಖರಂತೆ ಗುಂಡಿ ತೋಡುವುದು ಬಿಟ್ಟು ಎಸ್ ಐಟಿ ತನಿಖೆ ಸರಿಯಾದ ರೀತಿಯಲ್ಲಿ ಮುಂದುವರೆಯಲಿ.
ಈ ವಿಚಾರದಲ್ಲಿ ಸರ್ಕಾರದ ಮೂರ್ಖನಡೆ ಈಗಾಗಲೇ ಜನರ ಮುಂದೆ ನಗೆಪಾಟಲಿಗೆ ಈಡಾಗಿದೆ ಎಂದು ಆಕ್ರೋಶ ಹೊರಹಾಕಿದರು. .