Select Your Language

Notifications

webdunia
webdunia
webdunia
webdunia

ದಸರಾ ಆನೆಗಳ ಜತೆ ರೀಲ್ಸ್‌ ಮಾಡಿ ಚೆಲ್ಲಾಟವಾಡಿದ ಯುವತಿಗೆ ಬಿಗ್‌ ಶಾಕ್‌

ಮೈಸೂರು ದಸರಾ 2025

Sampriya

ಮೈಸೂರು , ಶನಿವಾರ, 20 ಸೆಪ್ಟಂಬರ್ 2025 (15:54 IST)
Photo Credit X
ಮೈಸೂರು: ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ವಾಸ್ತವ್ಯ ಸ್ಥಳಕ್ಕೆ ಅನುಮತಿ ಪಡೆಯದೆ ಹೋಗಿ ಆನೆಗಳೊಂದಿಗೆ ಅಪಾಯಕಾರಿ ರೀಲ್ಸ್ ಮಾಡಿ, ಟೀಕೆಗೆ ಗುರಿಯಾಗಿದ್ದ ಯುವತಿ ವಿರುದ್ಧ ಇದೀಗ ಪ್ರಕರಣ ದಾಖಲಾಗಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಗುರುವಾರ ರಾತ್ರಿ ಅನುಮತಿ ಪಡೆಯದೆ ಆನೆಗಳು ವಾಸ್ತವ್ಯವಿದ್ದ ಸ್ಥಳಕ್ಕೆ ತೆರಳಿ ಆನೆಗಳೊಂದಿಗೆ ಅಪಾಯಕಾರಿಯಾಗಿ ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಯುವತಿ ಹರಿಬಿಟ್ಟಿದ್ದಳು. 

ಯುವತಿಯ ನಡೆ ಹಾಗೂ ನಿಯಮ ಉಲ್ಲಂಘಟನೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಅರಣ್ಯ ಅಧಿಕಾರಿಗಳು ಇದೀಗ ಯುವತಿ ವಿರುದ್ಧ ಪ‍್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ. 

ಅರಮನೆ ಆವರಣದಲ್ಲಿ ಆನೆ ಹಾಗೂ ಮಾವುತರ ಕುಟುಂಬದ ವಾಸ್ತವ್ಯಕ್ಕೆ ಅರಣ್ಯ ಇಲಾಖೆ ವ್ಯವಸ್ಥೆ ಮಾಡಿದ್ದು, ಅಲ್ಲಿಗೆ ಹೋಗಲು ಅನುಮತಿ ಪಡೆಯುವುದು ಕಡ್ಡಾಯ. ಇದನ್ನು ಉಲ್ಲಂಘಿಸಿ ಯುವತಿ ಆನೆಯ ಬಳಿಗೆ ತೆರಳಿ, ಸೊಂಡಿಲನ್ನು ತಬ್ಬಿಕೊಂಡು ಮುದ್ದಾಡಿರುವ ವಿಡಿಯೋ ಚಿತ್ರೀಕರಿಸಿದ್ದಾರೆ. ವಿಡಿಯೊ ನೋಡಿದ ಹಲವರು ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

‘ಸಿಬ್ಬಂದಿಯ ಕಣ್ತಪ್ಪಿಸಿ ಆನೆಯ ಬಳಿಗೆ ತೆರಳಿದ್ದ ಯುವತಿಯನ್ನು ಪತ್ತೆ ಹಚ್ಚಲಾಗುವುದು. ಅನುಮತಿ ಪಡೆಯದೆ ಆನೆ ಬಳಿ ತೆರಳಿ ವಿಡಿಯೊ ಹಾಗೂ ಫೊಟೊ ತೆಗೆದವರ ವಿರುದ್ಧ ಈ ಹಿಂದೆ ಮೂರು ಪ್ರಕರಣ ದಾಖಲಿಸಿಕೊಂಡು ₹1 ಸಾವಿರ ದಂಡ ವಿಧಿಸಿದ್ದೇವೆ’ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಬಿ. ಪ್ರಭುಗೌಡ ತಿಳಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಕೆಆರ್ ಪುರಂನ ಗೋಡೆಗಳ ಮೇಲೆ ಸಮುದಾಯ ಸಹಭಾಗಿತ್ವದ ಭಿತ್ತಿಚಿತ್ರದ ಚಿತ್ತಾರ