ಜೂನ್ 5 ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗೀಯ ಸಸ್ಯಕ್ಷೇತ್ರಗಳಿಂದ ಸಾರ್ವಜನಿಕರಿಗೆ ಉಚಿತ ಸಸಿ ವಿತರಿಸಲು ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿರ್ದೇಶನವನ್ನು ನೀಡುತ್ತಾರೆ.
ಅದರಂತೆ, ಪಾಲಿಕೆಯ ಅರಣ್ಯ ವಿಭಾಗದ ವಿವಿಧ ವಲಯಗಳ ವ್ಯಾಪ್ತಿಯಲ್ಲಿರುವ ಸಸ್ಯಕ್ಷೇತ್ರಗಳಲ್ಲಿ “8X12” ಅಳತೆಯ ವಿವಿಧ ಜಾತಿಯ ಸಸಿಗಳು ಲಭ್ಯವಿದ್ದು, “ವಿಶ್ವ ಪರಿಸರ ದಿನಾಚರಣೆ” ಅಂಗವಾಗಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಗುವುದು. ಈ ಸಂಬಂಧ ಆಸಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿ ಉಚಿತವಾಗಿ ಸಸಿಗಳನ್ನು ಪಡೆದುಕೊಂಡು ಸಸಿಗಳನ್ನು ನೆಟ್ಟು ಪೋಷಣೆ ಮಾಡಬಹುದೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿಶೇಷ ಕೌಂಟರ್ ಮೂಲಕ ಸಸಿಗಳ ವಿತರಣೆ:
“ವಿಶ್ವ ಪರಿಸರ ದಿನಾಚರಣೆ” ದಿನದಿಂದ(ಜೂನ್ 5 ರಿಂದ) ಪಾಲಿಕೆ ಕೇಂದ್ರ ಕಛೇರಿ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ವಿಶೇಷ ಕೌಂಟರ್(Special Counter) ಮೂಲಕ ಪ್ರತಿನಿತ್ಯ ವಿವಿಧ ಜಾತಿಯ ಸಸಿಗಳನ್ನು ವಿತರಿಸಲುಗುವುದು. ಈ ಪೈಕಿ ಆಸಕ್ತರು ಸ್ಥಳಕ್ಕೆ ಭೇಟಿ ನೀಡಿ ಮನವಿ ಪ್ರತ್ರ ಸಲ್ಲಿಸಿ ಸಸಿಗಳನ್ನು ಪಡೆದು ಪೋಷಣೆ ಮಾಡಬಹುದು.
ಸಸ್ಯಕ್ಷೇತ್ರಗಳ ವಿವರ:
1. ಕೂಡ್ಲು - 7019196107
2. ಅಟ್ಟೂರು - 9480685196
3. ಜ್ಞಾನಭಾರತಿ ಆವರಣ - 9164042566
4. ಮಲ್ಲತ್ತಹಳ್ಳಿ - 9164042566
5. ಕೆಂಪಾಪುರ - 9480685196
6. ದೊಡ್ಡಬಸ್ತಿ - 9480685196