Select Your Language

Notifications

webdunia
webdunia
webdunia
webdunia

ಜೂನ್‌ 6ರೊಳಗೆ ರಸ್ತೆ ಗುಂಡಿ ಮುಕ್ತ: ಬಿಬಿಎಂಪಿ ಆಯುಕ್ತ ತುಷಾರ್ ಗಿರಿಧರ್

ಜೂನ್‌ 6ರೊಳಗೆ ರಸ್ತೆ ಗುಂಡಿ ಮುಕ್ತ: ಬಿಬಿಎಂಪಿ ಆಯುಕ್ತ ತುಷಾರ್ ಗಿರಿಧರ್
bengaluru , ಬುಧವಾರ, 1 ಜೂನ್ 2022 (15:32 IST)
ಮೇ ತಿಂಗಳಲ್ಲಿ ಸತತ ಒಂದು ವಾರ ಮಳೆ ಬಂದಿದ್ದರಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ವಿಳಂಬವಾಗಿದ್ದು, ಜೂನ್‌ 6ರೊಳಗೆ ನಗರದ ಎಲ್ಲಾ ಒಳ ರಸ್ತೆ ಗುಂಡಿ ಮುಚ್ಚಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿಧರ್‌ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕೈದು ದಿನಗಳಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗಿದೆ. ನಗರದಲ್ಲಿರುವ ಗುಂಡಿಗಳ ಸರಾಸರಿ ಅಳತೆ 2 ಅಡಿ ವಿಸ್ತೀರ್ಣವಿದ್ದು, 6 ರೊಳಗೆ ಎಲ್ಲಾ ರಸ್ತೆ ಗುಂಡಿ ಮುಚ್ಚಲಾಗುವುದು ಎಂದರು.
ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಹಲ್ಲೆ ನಡೆದಿದೆ ಎಂಬ ವಿಷಯದಲ್ಲಿ ವಿಶೇಷ ಆಯುಕ್ತ ರವೀಂದ್ರ ಅವರ ನೇತೃತ್ವದಲ್ಲಿ ತ್ವರಿತ ತನಿಖೆ ನಡೆಸಲಾಗುವುದು. ಕಂಪನಿ ಹಾಗೂ ಪ್ರಹ್ಲಾದ್ ಗೆ ನೊಟೀಸ್ ನೀಡಲಾಗಿದೆ. ರಸ್ತೆ ಗುಂಡಿ ಮುಚ್ಚುವ ಪೈಥಾನ್ ನಿರ್ವಹಣೆ ಹೊಣೆಯಿಂದ ಪ್ರಹ್ಲಾದ್ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಬಿಬಿಎಂಪಿಗೆ ಹೊಸದಾಗಿ ಸೇರಿದ 110 ಹಳ್ಳಿಗಳ ಅಭಿವೃದ್ಧಿಗೆ 1000 ಕೋಟಿ ಅನುದಾನ ಮೀಸಲಿಡಲಾಗಿದೆ. ಜಲಮಂಡಳಿಯಿಂದ ನೀರಿನ ಪೂರೈಕೆ ಕೆಲ್ಸ ತ್ವರಿತಗೊಳಿಸಲಾಗುತ್ತಿದೆ. ಪ್ರತಿ ವಾರ್ಡ್ ಗೆ 30 ಲಕ್ಷ ರಸ್ತೆ ಗುಂಡಿ ಮುಚ್ಚಲು ಮೀಸಲಿಡಲಾಗಿದೆ ಎಂದು ಅವರು ವಿವರಿಸಿದರು.
2011ರ ಜನಗಣತಿ ಪ್ರಕಾರ 243 ವಾರ್ಡ್ ನಿಗದಿ ಮಾಡಲಾಗಿದೆ. ಪ್ರತಿ ವಾರ್ಡ್ ನಲ್ಲಿ 28 ಸಾವಿರ ಆಸುಪಾಸಿನಲ್ಲಿ ಜನಸಂಖ್ಯೆ ಇರಲಿದೆ. ಕರಡು ಪ್ರತಿ ಕನ್ನಡ, ಇಂಗ್ಲೀಷ್ ಎರಡರಲ್ಲೂ ಪ್ರಕಟಿಸಲಾಗುವುದು. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುವುದು ವರದಿ ಪೂರ್ಣ ವಿವರ ಸರಕಾರ ಕೇಳಿದ್ದರಿಂದ ವರದಿ ನೀಡಲು ತಡವಾಗುತ್ತಿದೆ ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸೋನಿಯಾ, ರಾಹುಲ್‌ ಗಾಂಧಿಗೆ ಇಡಿ ಸಮನ್ಸ್ ಜಾರಿ!