Publish Date: Wed, 01 Jun 2022 (10:30 IST)
Updated Date: Wed, 01 Jun 2022 (11:09 IST)
ಮೈಸೂರು : ಮಾನಸಿಕ ಖಿನ್ನತೆಗೆ ಒಳಗಾದ ತಾಯಿ ತನ್ನ 8 ತಿಂಗಳ ಮಗು ಸಮೇತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಂಜನಗೂಡಿನ ದಾಸನೂರು ಗ್ರಾಮದಲ್ಲಿ ನಡೆದಿದೆ.
ಸಿಂಧು(24) ಹಾಗೂ 8 ತಿಂಗಳ ಮಗು ಮುದ್ದು ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆಯ ಸಿಂಧು, ದಾಸನೂರಿನ ಮಹದೇವಸ್ವಾಮಿ ಅವರನ್ನು ವಿವಾಹವಾಗಿದ್ದಳು.
ಈ ದಂಪತಿ ಮದುವೆಯಾಗಿ 9 ವರ್ಷ ಕಳೆದರೂ ಮಕ್ಕಳಗಿರಲಿಲ್ಲ. ಸಿಂಧುಗೆ ನಾಲ್ಕಾರು ಬಾರಿ ಗರ್ಭಪಾತವಾಗಿದ್ದು, ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು.
ಪರಿಣಾಮ ಮಂಗಳವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮಗು ಸಮೇತ ಬೆಂಕಿ ಹಚ್ಚಿಕೊಂಡಿದ್ದಾಳೆ. ಕೂಡಲೇ ತಾಯಿ, ಮಗುವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.