Select Your Language

Notifications

webdunia
webdunia
webdunia
webdunia

ಪ್ರಿಯತಮನನ್ನು ಸೇರಲು ನದಿಯಲ್ಲಿ ಈಜಿ ಬಂದ ಯುವತಿ!

ಮಹಿಳೆ
ಕೋಲ್ಕೊತ್ತಾ , ಬುಧವಾರ, 1 ಜೂನ್ 2022 (10:20 IST)
ಕೋಲ್ಕೊತ್ತಾ: ನಿನಗಾಗಿ ನಾನು ಏಳೇಳು ಸಮುದ್ರ ದಾಟಿ ಬರುವೆ ಎಂದು ಪ್ರೇಮಿಗಳು ಬಾಯಿ ಮಾತಿನಲ್ಲಿ ಹೇಳುವುದು ಕೇಳಿದ್ದೇವೆ. ಆದರೆ ಈ ಯುವತಿ ತನ್ನ ಪ್ರಿಯಕರನಿಗಾಗಿ ಆ ಮಾತು ನಿಜ ಮಾಡಿದ್ದಾಳೆ!

ಬಾಂಗ್ಲಾ ಮೂಲದ ಕೃಷ್ಣ ಮಂಡಲ್ ಎಂಬ ಯುವತಿ  ಮತ್ತು ಭಾರತೀಯ ಮೂಲದ ಅಭಿಕ್ ಮಂಡಲ್ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಪಾಸ್ ಪೋರ್ಟ್ ಇಲ್ಲದ ಕಾರಣ ಕೃಷ್ಣ ಮಂಡಲ್ ತನ್ನ ಪ್ರಿಯಕರನನ್ನು ಭೇಟಿಯಾಗಲು ಅಕ್ರಮ ಹಾದಿ ಹಿಡಿದಿದ್ದಳು.

ಭಾರತದಲ್ಲಿ ತನ್ನ ಗೆಳೆಯನನ್ನು ತಲುಪಲು ನದಿಯಲ್ಲಿ ಸುಮಾರು 1 ಗಂಟೆ ಈಜಿ ಬಂದಿದ್ದಾಳೆ. ಕೊನೆಗೆ ಕೋಲ್ಕೊತ್ತಾದ ಕಾಳಿಘಾಟ್ ದೇವಾಲಯದಲ್ಲಿ ಪ್ರಿಯತಮನ್ನು ಭೇಟಿಯಾಗಿದ್ದಾಳೆ. ಆದರೆ ಆಕೆ ಅಕ್ರಮವಾಗಿ ಭಾರತ ಪ್ರವೇಶಿಸಿರುವುದರಿಂದ ಹೈಕಮಿಷನರ್ ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದಿದ್ದು, ಬಾಂಗ್ಲಾಗೆ ಹಸ್ತಾಂತರಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಾದ್ಯಂತ ಉದ್ಯಮಿಗಳ ಐಟಿ ಶಾಕ್!