Select Your Language

Notifications

webdunia
webdunia
webdunia
webdunia

ನವಸಂಕಲ್ಪ ಹೊತ್ತ ಕಾಂಗ್ರೆಸ್; 2023-24 ಚುನಾವಣೆ ಗೆಲುವಿಗೆ ಮಂತ್ರ ಪಟನೆ

ನವಸಂಕಲ್ಪ ಹೊತ್ತ ಕಾಂಗ್ರೆಸ್; 2023-24 ಚುನಾವಣೆ ಗೆಲುವಿಗೆ ಮಂತ್ರ ಪಟನೆ
bangalore , ಗುರುವಾರ, 2 ಜೂನ್ 2022 (20:35 IST)
ಕಳೆದ ತಿಂಗಳು ರಾಜಸ್ಥಾನದ ಉದಯ್ಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನ್ ಶಿಬಿರಕ್ಕೆ ಪರ್ಯಾಯವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಎರಡು ದಿನಗಳ ನವಸಂಕಲ್ಪ ಶಿಬಿರವನ್ನ  ಬೆಂಗಳೂರು ನಗರದ ಹೊರವಲಯದ ರೆಸಾರ್ಟ್ ಒಂದರಲ್ಲಿ ಆಯೋಜಿಸಿದ್ದಾರೆ. 
 
ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ಸಿನ ಸುಮಾರು 450ಕ್ಕು ಹೆಚ್ಚು ಮುಖಂಡರು ಭಾಗಯಾಗಿದ್ದು ಎಲ್ಲಾ ಹಾಲಿ ಹಾಗು ಮಾಜಿ ಶಾಸಕರು ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ 2023-24ರ ಚುನಾವಣೆ ಎದುರಿಸುವುದು ಹಾಗು ಗೆಲುವಿನ ರೋಡ್ಮ್ಯಾಪ್ ರೂಪಿಸಲಾಗುವುದು ಎಂದು ಹೇಳಲಾಗಿದೆ. 
 
ಒಟ್ಟು ಆರು ಸಮಿತಿಗಳನ್ನು ರಚಿಸಲಾಗಿದ್ದು ಇಲ್ಲಿ ನಾಯಕರು ಪ್ರತ್ಯೇಕವಾಗಿ ತಮ್ಮ ತಮ್ಮ ಆನಿಸಿಕೆಗಳನ್ನು ಹಂಚಿಕೊಳ್ಳಬಹುದು ಎಂದು ತಿಳಿಸಲಾಗಿದೆ. 
 
ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾನು ಆದ್ಯಕ್ಷನಾಗಿ ಕಾಂಗ್ರೆಸ್ ಭವನದಲ್ಲಿ ಪದಗ್ರಹಣ ಮಾಡುವ ಸಮಯದಲ್ಲಿ ಒಂದು ಮಾತನ್ನ ಹೇಳಿದೆ ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ಹೇಳಿದ್ದನ್ನ ನೆನಪಿಸಿಕೊಂಡರು. 
 
ಮುಂದಿವರೆದು, ಕಳೆದ 7-8 ತಿಂಗಳ ಹಿಂದೆ ಶಿಬಿರವನ್ನ ನಡೆಸಲು ಯೋಜಿಸಲಾಗಿತ್ತು ಆದರೆ, ಉಪಚುನಾವಣೆಗಳು, ಅಧಿವೇಶನ ಹಾಗು ಪ್ರತಿಭಟನೆಗಳಿದ್ದ ಕಾರಣ ಶಿಬಿರವನ್ನ ನಡೆಸಲು ಸಾಧ್ಯವಾಗಿರಲಿಲ್ಲ. 
 
ಆದರೆ, ಎಐಸಿಸಿ ಸೂಚನೆ ಹಾಗು ಮಾರ್ಗದರ್ಶನದ ಮೇರೆಗೆ ಕರ್ನಾಟಕದಲ್ಲಿ ಶಿಬಿರವನ್ನ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಚುನಾವಣೆ ಎದುರಿಸುವುದು ಹಾಗು ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಕುರಿತು ಉದಯ್ಪುರದಲ್ಲಿ ಚರ್ಚಿಸಲಾಗಿತ್ತು. ರಾಜಸ್ಥಾನದ ಶಿಬಿರದಲ್ಲಿ ಪಾಲ್ಗೊಂಡವರನ್ನೇ 6 ವಿವಿಧ ಸಮಿತಿಗಳ  ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ. 
 
ಪಕ್ಷದ ಎಲ್ಲಾ ನಾಯಕರು ಹಾಗು ಕಾರ್ಯಕರ್ತರು ಕನಿಷ್ಠ 15-20ದಿನ ಪಕ್ಷ ಸಂಘಟನೆಗಾಗಿ ಮುಡಿಪಿಡಬೇಕು. ಸ್ಥಳೀಯ ಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಪಕ್ಷಕ್ಕೆ ಬರಮಾಡಿಕೊಳ್ಳಬೇಕು, ಬೂತ್ ಮಟ್ಟದಲ್ಲಿ ಸಭೆ ನಡೆಸಬೇಕು ಹಾಗು ಅಸಮಾಧಾನಿತರನ್ನು ಸಮಾಧಾನ ಮಾಡಬೇಕು. 
 
ಪ್ರತಿ ಜಿಲ್ಲಾ ಕೇಂದ್ರಗಳಲ್ಲು ಆಗಷ್ಟ್ 9-15ರ ವರೆಗೆ ತಿರಂಗಾ ಯನ್ನು ಮಾಡಬೇಕು. ಇದರ ಜೊತೆಜೊತೆಗೆ ಶಿಬಿರದಲ್ಲಿ ಚರ್ಚಿಸಲಾದ ವಿಚಾರಗಳನ್ನು ಯಾವ ನಾಯಕರು ಸಹ ಮಾಧ್ಯಮಗಳ ಮುಂದೆ ತೆರೆದಿಡಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ. 
 
ನಂತರ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೈದ್ದಾಂತಿಕ ನೆಲೆಗಟ್ಟು ಹಾಗು ರಾಜಕೀಯವಾಗಿ ಚುನಾವಣೆ ಎದುರಿಸಲು ರೋಡ್ ಮ್ಯಾಪ್ ತಯಾರಿಸುವ ಬಗ್ಗೆ ಶಿಬಿರದಲ್ಲಿ ಪ್ರಮುಖವಾಗಿ ಚರ್ಚಿಸಲಾಗುವುದು. 
 
ಮುಂದುವರೆದು ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ ಅದಕ್ಕೆ ಪೂರಕವೆಂಬಂತೆ ನಾವು ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಜನರು ಕಾಂಗ್ರೆಸ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮುಂದಿನ ದಿನಗಳಲ್ಲಿ ಬದಲಾವಣೆಯ ಪರ್ವ ಕರ್ನಾಟಕದಿಂದಲೇ ಆರಂಭವಾಗುತ್ತದೆ ಎಂದು ಬಣ್ಣಿಸಿದ್ದಾರೆ. 
 
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ 2024ಕ್ಕೆ ಲೋಕಸಭಾ ಚುನಾವಣೆ ಇದೆ, ಕರ್ನಾಟಕದಲ್ಲಿ 2023ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡಯಲಿದೆ. ಇವುಗಳ ಜೊತೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಿಗೆ, ಮಹಾನಗರ ಪಾಲಿಕೆ ಚುನಾವಣೆ ಬರುತ್ತಿದೆ. 
 
ಈ ಹಿನ್ನೆಲೆಯಲ್ಲಿ ಇಂದು ನವ ಸಂಕಲ್ಪ ಚಿಂತನಾ ಶಿಬಿರ ಆಯೋಜಿಸಲಾಗಿದೆ. ಪಕ್ಷ ಬೂತ್ ಮಟ್ಟದಿಂದ ಕೆಪಿಸಿಸಿ ಮಟ್ಟದ ವರೆಗೆ ಸಂಘಟಿತಗೊಂಡರೆ ಚುನಾವಣೆಗಳ ಗೆಲುವು ಕಷ್ಟದ ಕೆಲಸವಲ್ಲ. ಇಂತಹ ಹಲವು ಚುನಾವಣೆಗಳನ್ನು ಯಶಸ್ವಿಯಾಗಿ ಪಕ್ಷ ಈಗಾಗಲೇ ಎದುರಿಸಿದೆ ಕೂಡ ಎಂದು ಹೇಳಿದ್ದಾರೆ.
 
ಸರ್ಕಾರ ಈಗ ತರಾತುರಿಯಲ್ಲಿ ಚುನಾವಣೆ ನಡೆಸಲು ಮುಂದಾಗಿದೆ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಸಲು ಆದೇಶಿಸಲಾಗಿದೆ. ಆದ್ದರಿಂದ ನಮ್ಮ ಕಾರ್ಯಕರ್ತರು ಎಲ್ಲರು ಸಜ್ಜಾಗಿರಬೇಕು. ಚುನಾವಣೆ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ನೋಡಿದ್ದರೆ ಮಹಿಳೆಯರಿಗೆ ಹಾಗು ಹಿಂದುಳಿದವರಿಗೆ ಯಾವುದೇ ಮೀಸಲಾತಿಯನ್ನು ನೀಡಲು ಪಲವಿಲ್ಲ ಎಂಬ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಚಾಟಿ ಬೀಸಿದ್ದಾರೆ. 
 
ಒಟ್ಟಿನಲ್ಲಿ ಕೆಪಿಸಿಸಿ ನಡೆಸುತ್ತಿರುವ ಎರಡು ದಿನಗಳ ಚಿಂತನಾ ಶಿಬಿರ ರಾಜ್ಯ ಹಾಗು ರಾಷ್ಟ್ರ ಕಾಂಗ್ರೆಸ್ನಲ್ಲಿ ಯಾವ ರೀತಿಯ ಬದಲಾವಣೆ ತರುತ್ತದೆ ಎಂಬುದನ್ನಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ 2, 3 ರಂದು ಹೈದರಾಬಾದ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ