Daily Horoscope

Select Your Language

Notifications

webdunia
webdunia
webdunia
webdunia

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹಾ ಎಡವಟ್ಟು

Huge Bangalore Metropolitan Policy
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹಾ ಎಡವಟ್ಟು ಮಾಡಿದ್ದು, ಕಾಮಗಾರಿ ವೇಳೆ ಕಾಂಕ್ರೀಟ್ ಕುಸಿದು 8 ಮಂದಿ ಗಾಯಗೊಂಡಿದ್ದಾರೆ.ಮೀರ್ ಖಾಸಿಂ  ಕಲ್ಕತ್ತ ಅವರ ಸ್ಥಿತಿ ಗಂಭೀರವಾಗಿದೆ. ಆಸಿಬುಲ್, ಶಿವಪ್ರಸಾದ್ , ರೆಹಮಾನ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೆಂಗಳೂರಿನ ಶ್ರೀನಗರದ ಕಾಳಿದಾದ ಸರ್ಕಲ್ ಬಳಿ 11:15 ಕ್ಕೆ ಘಟನೆ ನಡೆದಿದೆ. ರಾಜಕಾಲುವೆ ದುರಸ್ತಿ ಕಾರ್ಯದ ವೇಳೆ ಕಳಪೆ ಕಾಮಗಾರಿ ಮಾಡುತ್ತಿರುವುದು ಬಯಲಾಗಿದೆ.ಬಿಬಿಎಂಪಿ ರಾಜಕಾಲುವೆಗೆ ಮೇಲೆ ಮೊಲ್ಡಿಂಗ್ ಕಾಮಗಾರಿ ಶುರು ಮಾಡಿಕೊಂಡಿತ್ತು. ಇಂದು ಕಾರ್ಮಿಕರು ಕೆಲಸ ಮಾಡುವ ವೇಳೆಯಲ್ಲಿ ಘಟನೆ ನಡೆದಿದೆ. ರಾಜಕಾಲುವೆ ಕಾಮಗಾರಿ ಸಂದರ್ಭದಲ್ಲೇ ಬ್ರಿಡ್ಜ್ ಕುಸಿದಿದೆ. ಪರಿಣಾಮ 8 ಮಂದಿ ಕಾರ್ಮಿಕರು ಬ್ರಿಡ್ಜ್ ಮೇಲಿಂದ ಬಿದ್ದಿದ್ದಾರೆ. ಹಲವರು ರಾಜಕಾಲುವೆಗೆ ಬಿದ್ದಿರೋ ಶಂಕೆ ವ್ಯಕ್ತವಾಗುತ್ತಿದೆ. ಘಟನೆಯಲ್ಲಿ ಓರ್ವನ ರಕ್ಷಣೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೋಟೆಲ್ ಗಳಿಗೆ ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿ : ಬೆಸ್ಕಾಂ ಭರವಸೆ