Select Your Language

Notifications

webdunia
webdunia
webdunia
webdunia

ಓಲಾ ಡ್ರೈವರ್ ನಿಂದ ಹಲ್ಲೆಗೊಳಗಾಗಿದ್ದ ಯವತಿಯಿಂದ ಬೆಂಗಳೂರು ನಮ್ಮಿಂದಲೇ ಎಂದು ದರ್ಪ

Ola Driver

Krishnaveni K

ಬೆಂಗಳೂರು , ಶನಿವಾರ, 7 ಸೆಪ್ಟಂಬರ್ 2024 (09:59 IST)
Photo Credit: X
ಬೆಂಗಳೂರು: ಓಲಾ ಬುಕಿಂಗ್ ಕ್ಯಾನ್ಸಲ್ ಮಾಡಿಕೊಂಡಿದ್ದಕ್ಕೆ ಆಟೋ ಡ್ರೈವರ್ ನಿಂದ ಹಲ್ಲೆಗೊಳಗಾಗಿದ್ದ ಮಹಿಳೆ ಈಗ ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ನಡೆಯುತ್ತಿರುವುದೇ ನಮ್ಮಿಂದ ಎಂದು ದರ್ಪ ತೋರಿದ್ದಾಳೆ.

ಹಲ್ಲೆಗೊಳಗಾದ ವಿಡಿಯೋವನ್ನು ಮಹಿಳೆ ಟ್ವೀಟ್ ಮಾಡಿ ಬೆಂಗಳೂರು ಪೊಲೀಸರ ಗಮನಕ್ಕೆ ತಂದಿದ್ದಳು. ಇದಾದ ಬಳಿಕ ಆಕೆಗೆ ಭಾರೀ ಬೆಂಬಲ ವ್ಯಕ್ತವಾಗಿತ್ತು. ಬೆಂಗಳೂರು ಪೊಲೀಸರು ಸ್ವತಃ ಆಸಕ್ತಿ ವಹಿಸಿ ಮಹಿಳೆಗೆ ಹಲ್ಲೆ ಮಾಡಿದ ಓಲಾ ಕ್ಯಾಬ್ ಡ್ರೈವರ್ ನನ್ನು ಪತ್ತೆ ಮಾಡಿ ಬಂಧಿಸಿದ್ದರು. ಪೊಲೀಸರ ಕ್ರಮಕ್ಕೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿತ್ತು.

ಆದರೆ ಅದಾದ ಬಳಿಕ ಮಹಿಳೆ ದರ್ಪ ತೋರಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಡಿಯೋ ಹಂಚಿಕೊಂಡ ಮಹಿಳೆ ಬೆಂಗಳೂರು ನಡೆಯೋದೇ ನಮ್ಮಂಥವರಿಂದ ಎಂದು ಹೇಳಿಕೊಂಡಿದ್ದಾಳೆ. ಇದಕ್ಕೆ ಕನ್ನಡಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಮಹಿಳೆ ಹೊರ ರಾಜ್ಯದವಳಾಗಿದ್ದು, ತಮ್ಮಂಥವರಿಂದಲೇ ಬೆಂಗಳೂರು ನಡೆಯುತ್ತಿದೆ ಎಂಬರ್ಥದಲ್ಲಿ ಮಾತನಾಡಿದ್ದು ಬೆಂಗಳೂರಿಗರನ್ನು ಕೆರಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಜಿ ಕರ್ ಆಸ್ಪತ್ರೆಯ ಸಂದೀಪ್ ಘೋಷ್ ಐಷಾರಾಮಿ ಬಂಗಲೆ ನೋಡಿ ದಂಗಾದ ಇಡಿ ಅಧಿಕಾರಿಗಳು