Select Your Language

Notifications

webdunia
webdunia
webdunia
webdunia

ಗಣೇಶ ಚತುರ್ಥಿ ಇಫೆಕ್ಟ್: ಬೆಂಗಳೂರು ಮಾರುಕಟ್ಟೆ ಫುಲ್ ರಶ್, ಬೆಲೆ ಗಗನಕ್ಕೆ

KR Market

Krishnaveni K

ಬೆಂಗಳೂರು , ಶನಿವಾರ, 7 ಸೆಪ್ಟಂಬರ್ 2024 (09:05 IST)
ಬೆಂಗಳೂರು: ಗಣೇಶ ಚತುರ್ಥಿ ನಿಮಿತ್ತ ನಿನ್ನೆ ಸಂಜೆಯಿಂದಲೇ ಬೆಂಗಳೂರಿನ ಮಾರುಕಟ್ಟೆಗಳ ಜನಜಂಗುಳಿ ಕಂಡುಬಂದಿದ್ದು, ತರಕಾರಿ, ಹೂ, ಹಣ್ಣಿನ ಬೆಲೆಯೂ ಗಗನಕ್ಕೇರಿದೆ.

ಗಣೇಶ ಪೂಜೆಗೆ ಬೇಕಾದ ಹೂ, ಹಣ್ಣು, ಬಾಳೆ ಕಂಬ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಈ ಕಾರಣಕ್ಕೆ ನಿನ್ನೆ ಸಂಜೆಯಿಂದಲೇ ಕುಟುಂಬ ಸಮೇತ ಜನ ಮಾರುಕಟ್ಟೆಗಳಿಗೆ ಲಗ್ಗೆಯಿಟ್ಟಿದ್ದಾರೆ. ಕೆಆರ್ ಮಾರುಕಟ್ಟೆ, ಶಿವಾಜಿನಗರ, ಜಯನಗರ ಮಾರುಕಟ್ಟೆ ಸೇರಿದಂತೆ ಬಹುತೇಕ ಕಡೆ ಜನ ಜಂಗುಳಿ ಕಂಡುಬಂದಿದೆ.

ಇನ್ನು, ಈ ವಾರಂತ್ಯಕ್ಕೆ ಸತತ ರಜೆಯಿರುವ ಕಾರಣಕ್ಕೆ ಸಾಕಷ್ಟು ಜನ ತಮ್ಮ ಊರುಗಳಿಗೆ ತೆರಳುತ್ತಿದ್ದು, ನಿನ್ನೆ ಸಂಜೆ ನಗರದಲ್ಲಿ ಭಾರೀ ಸಂಚಾರ ದಟ್ಟಣೆ ಕಂಡುಬಂದಿದೆ. ಇಂದು ಗಣೇಶ ಹಬ್ಬದ ನಿಮಿತ್ತ ಹಲವೆಡೆ ರಸ್ತೆ ಬಂದ್ ಮಾಡಿ ಸಂಚಾರಿ ಪೊಲೀಸರು ಮೆರವಣಿಗೆಗೆ ಅನುಕೂಲ ಮಾಡಿಕೊಡುತ್ತಿದ್ದಾರೆ.

ಹೂವು ಹಣ್ಣುಗಳ ದರ ಎಂದಿಗಿಂತ ದುಪ್ಪಟ್ಟಾಗಿದೆ. ತೆಂಗಿನ ಕಾಯಿಯ ದರವೂ ಭಾರೀ ಏರಿಕೆಯಾಗಿದೆ. ಸಾಮಾನ್ಯವಾಗಿ 30 ರೂ.ಗೆ ಮಾರಾಟವಾಗುತ್ತಿದ್ದ ತೆಂಗಿನ ಕಾಯಿ ಬೆಲೆ ಈಗ 40 ರ ವರೆಗೆ ತಲುಪಿದೆ. ನಿನ್ನೆಯಿಂದಲೇ ದರ ಏರಿಕೆಯಾಗಿದ್ದು, ಇಂದು ಹಬ್ಬ ಮುಗಿಯುವವರೆಗೂ ದರ ಏರಿಕೆ ಮುಂದುವರಿಯಲಿದೆ. ನಾಳೆಯಿಂದ ಸಹಜ ಸ್ಥಿತಿಗೆ ಬರಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಕ್ಕಳಿಗೆ ರಕ್ಷೆಯಾಗಿರುವ ಪಕ್ಷಕ್ಕೆ ನಾನು ಸೇರಿಕೊಂಡಿದ್ದೇನೆ: ವಿನೇಶ್ ಫೋಗಟ್ ಮೊದಲ ಮಾತು