Select Your Language

Notifications

webdunia
webdunia
webdunia
webdunia

ಗಣೇಶನ ದೇಹದ ಪ್ರತಿಯೊಂದು ಅವಯವಕ್ಕೂ ಅರ್ಥವಿದೆ

Lord Ganesha

Krishnaveni K

ಬೆಂಗಳೂರು , ಶನಿವಾರ, 7 ಸೆಪ್ಟಂಬರ್ 2024 (08:29 IST)
ಬೆಂಗಳೂರು: ಗಣೇಶ ಎಂದರೆ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಅದೇನೋ ಪ್ರೀತಿ, ನಮ್ಮ ಮನೆಯವನೇ ಎಂಬ ಭಾವದಿಂದ ಪೂಜೆ ಮಾಡುತ್ತಾರೆ. ಗಣೇಶನಿಗೆ ದೇವಾದಿದೇವತೆಗಳಲ್ಲಿ ಅಷ್ಟೊಂದು ಆದ್ಯತೆ ಇರುವುದಕ್ಕೆ ಕಾರಣವೂ ಇದೆ. ಅವನ ದೇಹದ ಪ್ರತಿಯೊಂದು ಅಂಗಾಂಗಕ್ಕೂ ವಿಶೇಷ ಅರ್ಥವಿದೆ.

ಗಣೇಶನ ತಲೆ: ಗಣಪತಿ ದೇವರಿಗೆ ದೊಡ್ಡ ತಲೆಯಿದೆ. ಅದಕ್ಕೆ ವಿಶೇಷ ಅರ್ಥವೂ ಇದೆ. ಗಣೇಶನನ್ನು ವಿದ್ಯಾಧಿಪತಿ ಎಂದು ಪರಿಗಣಿಸುತ್ತಾರೆ. ಆತ ಅಪಾರ ಬುದ್ಧಿವಂತ ದೇವರು. ಹೀಗಾಗಿಯೇ ಅವನ ತಲೆ ಅಪಾರ ಜ್ಞಾನವನ್ನು ಸೂಚಿಸುತ್ತದೆ.

ಗಣೇಶನ ಕಿವಿಗಳು: ಕರಿವದನ ಗಣೇಶನಿಗೆ ದೊಡ್ಡ ಕಿವಿಗಳಿವೆ. ಅವನ ಎರಡು ಅಗಲವಾದ ಕಿವಿಗಳು ನಾವು ಒಳ್ಳೆಯದನ್ನು ಹೆಚ್ಚು ಹೆಚ್ಚು ಆಲಿಸಬೇಕು. ಉತ್ತಮ ಕೇಳುಗರಾಗಬೇಕು ಎಂಬುದನ್ನು ಸೂಚಿಸುತ್ತದೆ.

ಗಣೇಶನ ಬಾಯಿ: ದೊಡ್ಡ ಕಿವಿಗಳಿರುವ ಗಣೇಶನಿಗೆ ಬಾಯಿಗಳು ಮಾತ್ರ ಪುಟ್ಟದಾಗಿವೆ. ಅದರ ಅರ್ಥ ಹೆಚ್ಚು ಕೇಳಿ, ಆದರೆ ಕಡಿಮೆ ಮಾತನಾಡಿ ಎಂದಾಗಿದೆ.
ಗಣೇಶನ ಉದರ: ಗಣೇಶನನ್ನು ದೊಡ್ಡ ಹೊಟ್ಟೆಯವನು ಎಂದು ತಮಾಷೆ ಮಾಡುತ್ತಾರೆ. ಆದರೆ ಇದರ ಅರ್ಥ ಹಾಗಲ್ಲ. ಜೀವನದಲ್ಲಿ ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಸಮನಾಗಿ ಸ್ವೀಕರಿಸಿ ಜೀರ್ಣಿಸಿಕೊಳ್ಳಬೇಕು ಎಂದಾಗಿದೆ.
ಗಣೇಶನ ನಾಲ್ಕು ಕೈಗಳು: ಮೊದಲನೆಯ ಕೈ ಬಂಧ, ಆಸೆ, ನೋವುಗಳನ್ನು ಬೇರ್ಪಡಿಸುವ ಸಂಕೇತವಾಗಿದೆ. ಎರಡನೆಯ ಕೈ ಮಾನವ ವಿಕಾಸದ ಸಂಕೇತವಾಗಿದೆ. ಮೂರನೆಯ ಕೈ ಆಧ್ಯಾತ್ಮಿಕತೆಯ ಸಂಕೇತವಾಗಿದೆ. ನಾಲ್ಕನೆಯ ಕೈ ಭಕ್ತಿ, ಮಾಧುರ್ಯದ ಸಂಕೇತವಾಗಿದೆ.
ಗಣೇಶನ ಕಾಲುಗಳು: ಗಣೇಶನ ಕಾಲುಗಳೂ ಆಧ್ಯಾತ್ಮಿಕತೆ, ಅರಿವಿನ ಸಂಕೇತವಾಗಿದೆ.
ಗಣೇಶನ ಏಕದಂತ: ಗಣೇಶ ಎಂದರೆ ಏಕದಂತ ಎಂದೇ ಹೆಸರು ವಾಸಿ. ಇದು ಕೆಟ್ಟದನ್ನು ಹೊಸಕಿ ಹಾಕಿ ಒಳ್ಳೆಯದನ್ನು ಸ್ವೀಕರಿಸುವುದರ ಸಂಕೇತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?