Select Your Language

Notifications

webdunia
webdunia
webdunia
webdunia

ಗಣೇಶ ಹಬ್ಬಕ್ಕೆ ಊರಿಗೆ ಹೋಗಲು ಪ್ಲ್ಯಾನ್ ಮಾಡಿದ್ದೀರಾ, ನಿಮಗೆ ಕಾದಿದೆ ಶಾಕ್

KSRTC

Krishnaveni K

ಬೆಂಗಳೂರು , ಸೋಮವಾರ, 2 ಸೆಪ್ಟಂಬರ್ 2024 (11:17 IST)
ಬೆಂಗಳೂರು: ಈ ವಾರಂತ್ಯಕ್ಕೆ ಗಣೇಶ ಹಬ್ಬಕ್ಕೆ ಎರಡು ದಿನ ರಜೆ ಇದೆ, ಊರಿನಲ್ಲಿ ಹಬ್ಬ ಆಚರಿಸೋಣ ಎಂದು ಬೆಂಗಳೂರಿಗರು ಅಂದುಕೊಂಡಿದ್ದರೆ ಅವರಿಗೆ ಶಾಕ್ ಕಾದಿದೆ.

ವಾರಂತ್ಯದಲ್ಲಿ ಸುದೀರ್ಘ ರಜೆಯಿದ್ದರೆ ಕೆಎಸ್ ಆರ್ ಟಿಸಿ, ಖಾಸಗಿ ಬಸ್ ಗಳಿಗೆ ಬೇಡಿಕೆ ಹೆಚ್ಚುತ್ತದೆ. ಇದೀಗ ಅದೇ ಪರಿಸ್ಥಿತಿಯಾಗಿದೆ. ಚೌತಿ ಹಬ್ಬಕ್ಕೆ ಊರಿಗೆ ಹೋಗಲು ಸಾಕಷ್ಟು ಜನ ತುದಿಗಾಲಲ್ಲಿ ನಿಂತಿದ್ದರು. ಆದರೆ ಊರಿಗೆ ಹೋಗಲು ತಯಾರಾಗಿರುವವರಿಗೆ ಬಸ್ ಟಿಕೆಟ್ ದರ ಶಾಕ್ ನೀಡಿದೆ.

ಈಗಾಗಲೇ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಬಹುತೇಕ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ವಿಶೇಷ ಬಸ್ ಹಾಕಿದ್ದರೂ ಅದೂ ಬಿಸಿ ದೋಸೆಯಂತೆ ಖಾಲಿಯಾಗುತ್ತಿದೆ. ಹೀಗಾಗಿ ಖಾಸಗಿ ಬಸ್ ನತ್ತ ಜನ ಮುಖ ಮಾಡಿದ್ದಾರೆ. ಆದರೆ ಖಾಸಗಿ ಬಸ್ ನ ದರ ಸಾಮಾನ್ಯವಾಗಿ ಇರುವುದಕ್ಕಿಂತ ದುಪ್ಪಟ್ಟಾಗಿದೆ.

ಬೆಂಗಳೂರಿನಿಂದ ಮಂಗಳೂರು, ವಿಜಯಪುರಕ್ಕೆ 700 ರೂ. ಬಸ್ ಟಿಕೆಟ್ ದರವಿದ್ದರೆ ಈಗ 1400-1500 ರೂ.ವರೆಗೆ ತಲುಪಿದೆ. ಹುಬ್ಬಳ್ಳಿ ಕಡೆಗೆ 900 ರೂ.ಗಳಿದ್ದಟಿಕೆಟ್ ದರ 1300 ರೂ. ದಾಟಿದೆ. ಕೆಎಸ್ ಆರ್ ಟಿಸಿ ಕೂಡಾ ಸಾಮಾನ್ಯ ದಿನಗಳಿಗಿಂತ ಹೆಚ್ಚು ದರ ವಸೂಲಿ ಮಾಡುತ್ತಿವೆ. ಆದರೆ ಖಾಸಗಿ ಬಸ್ ಗಳಷ್ಟು ದುಬಾರಿಯಲ್ಲ ಎನ್ನಬಹುದು. ಆದರೂ ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಟಿಕೆಟ್ ದರ ನೋಡಿಯೇ ಹಿಂಜರಿಯುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಲಕ್ಷ್ಮಿ ಯೋಜನೆ ರೀಲ್ಸ್ ಮಾಡಿ ಪೋಸ್ಟ್ ಮಾಡುವವರಿಗೆ ಬಂಪರ್ ಆಫರ್