Publish Date: Sat, 18 Jul 2020 (15:38 IST)
Updated Date: Sat, 18 Jul 2020 (15:39 IST)
ದೇಹದ ನೋವು ಎಂದು ಹೇಳಿಕೊಂಡ ಮಹಿಳೆಯೊಬ್ಬಳಿಗೆ ಮಸಾಜ್ ಮಾಡಬೇಕಿದೆ ಎಂದು ಬಟ್ಟೆ ಕಳಚಿದ ಆರೋಪಿಯೊಬ್ಬ ಅತ್ಯಾಚಾರ ಎಸಗಿದ್ದಾನೆ.
ಕೊರೊನಾ ಸೋಂಕಿತೆ 40 ವರ್ಷದ ಮಹಿಳೆಗೆ ತಾನು ಡಾಕ್ಟರ್ ಇರುವುದಾಗಿ ಸುಳ್ಳು ಹೇಳಿದ 25 ವರ್ಷದ ಯುವಕನೊಬ್ಬ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.
ಮಹಿಳೆಯ ಕೊಠಡಿಗೆ ತೆರಳಿದ್ದ ಆರೋಪಿಯು ತಾನು ಡಾಕ್ಟರ್ ಅಂತ ಹೇಳಿಕೊಂಡಿದ್ದಾನೆ. ಸಮಸ್ಯೆ ಏನೇನಿದೆ ಅಂತ ಕೇಳಿದ್ದಾನೆ.
ಆಗ ಮಹಿಳೆ ದೇಹದ ನೋವಿದೆ ಎಂದಿದ್ದಾಳೆ. ಆಗ ಮಹಿಳೆಗೆ ಮಸಾಜ್ ಮಾಡಬೇಕಿದೆ ಎಂದು ನಂಬಿಸಿ ಬಟ್ಟೆ ಬಿಚ್ಚಿಸಿ ಅತ್ಯಾಚಾರ ಎಸಗಿದ್ದಾನೆ.
ಮುಂಬೈ ಪನ್ವೆಲ್ ಸ್ಟೇಷನ್ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.