Select Your Language

Notifications

webdunia
webdunia
webdunia
webdunia

ಜಿಮ್ ನಲ್ಲಿ ವರ್ಕೌಟ್ ವೇಳೆ ಸಾವು...!!!

ಜಿಮ್ ನಲ್ಲಿ ವರ್ಕೌಟ್ ವೇಳೆ ಸಾವು...!!!
ಬೆಂಗಳೂರು , ಶನಿವಾರ, 26 ಮಾರ್ಚ್ 2022 (17:52 IST)
ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
 
ವಿನಯ ಕುಮಾರಿ (44) ಮೃತ ಮಹಿಳೆ.
 
ಪ್ರತಿದಿನದಂತೆ ಶನಿವಾರವೂ ವಿನಯ ಕುಮಾರಿ ಮಲ್ಲೇಶಪಾಳ್ಯನಲ್ಲಿರುವ ಜಿಮ್ ಸೆಂಟರ್ ಗೆ ತೆರಳಿದ್ದಾರೆ.
ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ಪಟ್ಟರೂ, ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.
 
ಮೃತ ವಿನಯ ಕುಮಾರಿ ಮೂಲತ ಮಂಗಳೂರು ನಿವಾಸಿಯಾಗಿದ್ದು, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಲ್ಲೇಶಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏ.1ಕ್ಕೆ ತುಮಕೂರಿಗೆ ಅಮಿತ್ ಶಾ ಭೇಟಿ..