Select Your Language

Notifications

webdunia
webdunia
webdunia
webdunia

ಹಿಜಬ್ಗಾಗಿ ಪ್ರತಿಭಟನೆ : ಕಾನೂನು ಎಚ್ಚರಿಕೆ

ಹಿಜಬ್ಗಾಗಿ ಪ್ರತಿಭಟನೆ : ಕಾನೂನು ಎಚ್ಚರಿಕೆ
ಬೆಂಗಳೂರು , ಶನಿವಾರ, 26 ಮಾರ್ಚ್ 2022 (12:30 IST)
ಬೆಂಗಳೂರು : ಮುಂದಿನ ವಾರದಿಂದ ಪರೀಕ್ಷೆಗಳು ಆರಂಭವಾಗುತ್ತಿರುವ ಬೆನ್ನಲ್ಲೇ ಹಿಜಬ್ ಧರಿಸಲು ಅನುಮತಿ ನೀಡುವಂತೆ ಕೋರಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ವಿದ್ಯಾರ್ಥಿನಿಯರು ಮುಂದಾಗಿದ್ದಾರೆ.

ಈಗಾಗಲೇ ಉಡುಪಿಯ ವಿದ್ಯಾರ್ಥಿನಿಯರು ಬೆಂಗಳೂರಿಗೆ ಆಗಮಿಸಿದ್ದಾರೆ. ವಿದ್ಯಾರ್ಥಿನಿಯರ ಪರವಾಗಿ ಮಹಿಳಾ ಸಂಘಟನೆ ಶುಕ್ರವಾರ ಬೆಳಗ್ಗೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆಗೆ ಅನುಮತಿ ನೀಡುವಂತೆ ಕೋರಿ ಪೊಲೀಸರ ಬಳಿ ಮನವಿ ಮಾಡಿದ್ದಾರೆ.

ಆದರೆ ಆದರೆ ಪ್ರತಿಭಟನೆಗೆ ಪೊಲೀಸರು ಒಪ್ಪಿಗೆ ಸೂಚಿಸಿಲ್ಲ. ಜೊತೆಗೆ ಪ್ರತಿಭಟಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಖಡಕ್ ಆಗಿ ಹೇಳಿದ್ದಾರೆ.

ಪೊಲೀಸರು ಅನುಮತಿ ನೀಡದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಫ್ರೀಡಂಪಾರ್ಕ್ ನಲ್ಲಿ ಸಂಜೆ 4 ಗಂಟೆಗೆ ಪ್ರತಿಭಟನೆಯಿದೆ ಎನ್ನುವುದರ ಕುರಿತು ಮೆಸೇಜ್ ಹರಿದಾಡುತ್ತಿದೆ.

ಜೊತೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಲ್ಲಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ. ಇದರಿಂದಾಗಿ ಬೆಂಗಳೂರು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಪ್ರತಿಭಟನೆ ನಡೆಸಬೇಕಾದರೆ 5 ದಿನ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ನಿನ್ನೆ ಬೆಳಗ್ಗೆ ಅರ್ಜಿ ಸಲ್ಲಿಸಿ ಪ್ರತಿಭಟನೆಗೆ ಒಂದೇ ದಿನಕ್ಕೆ ಅವಕಾಶ ಕೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಪ್ರತಿಭಟನೆಗೆ ಅವಕಾಶ ಇಲ್ಲ. ಹಾಗೇನಾದರೂ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಹಿರ್ದೆಸೆಗೆ ಹೋದ ಬಾಲಕಿಯ ತಲೆ ಕಡಿದು ಊರೆಲ್ಲ ಸುತ್ತಿದ!