Select Your Language

Notifications

webdunia
webdunia
webdunia
webdunia

19 ನೇ ಮಹಡಿಯಿಂದ ಬಿದ್ದು ಮಹಿಳೆ ಆತ್ಮಹತ್ಯೆ

19 ನೇ ಮಹಡಿಯಿಂದ ಬಿದ್ದು ಮಹಿಳೆ ಆತ್ಮಹತ್ಯೆ
bangalore , ಭಾನುವಾರ, 25 ಡಿಸೆಂಬರ್ 2022 (18:29 IST)
19 ನೇ ಮಹಡಿಯಿಂದ ಬಿದ್ದು  ಮಹಿಳೆ ಸಾವನಪ್ಪಿರೋ ಘಟನೆ ತಲಘಟ್ಟಪುರ ಪೂರ್ವ ಹೈಲ್ಯಾಂಡ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.40ವರ್ಷದ ಚರಿಷ್ಮಾ ಮೃತ ಮಹಿಳೆಯಾಗಿದ್ದು, ಚರಿಷ್ಮಾ ಅನಾರೋಗ್ಯದಿಂದ ಬಳಲುತ್ತಿದ್ರು.ಕೆಲ ದಿನಗಳಿಂದ ಡಿಪ್ರೆಶನ್ ನಲ್ಲಿದ್ದ ಚರಿಷ್ಮಾ ಕಳೆದ 15 ವರ್ಷಗಳಿಂದ‌ ಕುಟುಂಬದಜೊತೆ ಕೆನಾಡದಲ್ಲಿ ವಾಸವಾಗಿದ್ರು‌.ಕರಿಷ್ಮಾ ಮತ್ತು ಕರಣ್ ಕೆಲ ದಿನಗಳ ಹಿಂದಷ್ಟೇ ಇಂಡಿಯಾಗೆ ಬಂದಿದ್ರು.ಕರಿಷ್ಮಾಗೆ ಇದ್ದಂತಹ ಡಿಪ್ರೆಶನ್ ನ ಟ್ರೀಟ್ಮೆಂಟ್ ಗಾಗಿ ಅಂತಾನೆ ಭಾರತಕ್ಕೆ ಬಂದಿದ್ದ ದಂಪತಿ ಪೂರ್ವ ಹೈಲ್ಯಾಂಡ ಅಪಾರ್ಟ್ಮೆಂಟ್ ನಲ್ಲಿ ವಾಸ್ತವ್ಯ ಹೂಡಿದ್ರು.
ಇದ್ರಿಂದ ಮನೆನೊಂದಿದ್ದ ಕರಿಷ್ಮಾ  ತಿಂಗಳ ಹಿಂದೆಯೂ ಸಹ ಆತ್ಮಹತ್ಯೆ ಗೆ ಯತ್ನಿಸಿದ್ರು‌. ಇಂದು ತಾನು ವಾಸವಿದ್ದ ಅಪಾರ್ಟ್ಮೆಂಟ್ ನ ಟೆರಸ್ ಗೆ ತೆರಳಿ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಘಟನೆ ಕುರಿತು ತಲಘಟ್ಟಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ 4 ದಿನ ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ