Select Your Language

Notifications

webdunia
webdunia
webdunia
webdunia

ಮುಂದಿನ 4 ದಿನ ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಮುಂದಿನ 4 ದಿನ ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
bangalore , ಭಾನುವಾರ, 25 ಡಿಸೆಂಬರ್ 2022 (18:21 IST)
ಕಳೆದ ಕೆಲವು ದಿನಗಳ ಹಿಂದೆ ಮಾಂಡೌಸ್ ಚಂಡಮಾರುತದ ಹಿನ್ನೆಲೆ ರಾಜ್ಯಾದ್ಯಂತ ಮಳೆ ಸುರಿದಿದ್ದು, ಬಳಿಕ ವರುಣ ಸ್ವಲ್ಪ ಬಿಡುವು ನೀಡಿದ್ದ. ಇದೀಗ ಮಳೆರಾಯ ಮತ್ತೆ ರಾಜ್ಯಕ್ಕೆ ಲಗ್ಗೆಯಿಡುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂದಿನ 4 ದಿನ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗಲಿದೆ. ಮಳೆ ದಕ್ಷಿಣ ಒಳನಾಡನ್ನು ಕಾಡಲಿದ್ದು, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿದ 9 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಬೆಳಗ್ಗೆಯಿಂದಲೂ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದೆ. ಮಳೆ ಸುರಿಯುವ ಸಾಧ್ಯತೆಯಿರುವುದರಿಂದ ಸಿಲಿಕಾನ್ ಸಿಟಿಯಲ್ಲಿ ಇನ್ನೂ 2 ದಿನ ಕೂಲ್ ಕೂಲ್ ವೆದರ್ ಮುಂದುವರಿಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಮುಖಂಡ ಅಲ್ತಾಫ್ ಮೇಲೆ ಅಟ್ಯಾಕ್ ಗೆ ಯತ್ನ ನಡೆಸುದವರು ಅಂದರ್