Publish Date: Sun, 25 Dec 2022 (15:16 IST)
Updated Date: Sun, 25 Dec 2022 (15:29 IST)
ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಸಿಲುಕಿದ್ದ ಈಶ್ವರಪ್ಪನವರಿಗೆ ಕ್ಲಿನ್ ಚಿಟ್ ಸಿಕ್ಕಿರೋ ಕಾರಣ ತಮ್ಮನ್ನು ಸಚಿವರನ್ನಾಗಿ ಮಾಡುವಂತೆ ಪಟ್ಟು ಹಿಡಿದಿದ್ರು..ಅಧಿವೇಶನಕ್ಕೂ ಗೈರಾಗಿದ್ರು.ನಂತರ ಸಿಎಂ ಕರೆದು ಕೆ.ಎಸ್.ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿಯವರಿಗೆ ಭರವಸೆ ನೀಡಿದ್ದಾರೆ.ಹೀಗಾಗಿ ಈ ಇಬ್ಬರಿಗೆ ಸಂಪುಟ ವಿಸ್ತರಣೆ ವೇಳೆ ಮರಳಿ ಸಂಪುಟಕ್ಕೆ ಸೇರ್ಪಡೆಯಾಗುವ ಅವಕಾಶ ಸಿಗಬಹುದು.ಇನ್ನು ಹಳೇ ಮೈಸೂರು ಭಾಗದಲ್ಲಿ ಸಿ.ಪಿ.ಯೋಗೀಶ್ವರ್ ಗೆ ಸ್ಥಾನ ಸಿಗಬಹುದು ಎಂದು ಹೇಳಲಾಗ್ತಾ ಇದೆ.ಹಿರಿಯೂರು ಕ್ಷೇತ್ರದ ಪೂರ್ಣಿಮಾ ಶ್ರೀನಿವಾಸ್ ಅವರ ಹೆಸರು ಮುನ್ನೆಲೆಗೆ ಬಂದಿದೆ.ಯಾದವ ಸಮುದಾಯದವನ್ನು ದೃಷ್ಟಿಯಲ್ಲಿಟ್ಟುಕೊಂಡು ಇವರಿಗೆ ಸ್ಥಾನ ಕೊಡಬಹುದು..ಇನ್ನು ರಾಜುಗೌಡ ಮತ್ತು ಎಂ.ಪಿ.ರೇಣುಕಾಚಾರ್ಯ ಹೆಸರು ಮುಂಚೂಣಿಯಲ್ಲಿದೆ.ಏನೇ ಆದ್ರೂ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟರೆ ಮಾತ್ರ ಇವರಿಗೆಲ್ಲ ಸ್ಥಾನ ಸಿಗಲಿದೆ.