Select Your Language

Notifications

webdunia
webdunia
webdunia
webdunia

ಕೋಟಿ ಕೋಟಿ ಲೋನ್ ಬೇಕಾದವರೇ ಇವರ ಟಾರ್ಗೆಟ್

ಕೋಟಿ ಕೋಟಿ ಲೋನ್ ಬೇಕಾದವರೇ ಇವರ ಟಾರ್ಗೆಟ್
bangalore , ಭಾನುವಾರ, 25 ಡಿಸೆಂಬರ್ 2022 (15:05 IST)
ಗೋಲ್ಡ್ ಬಿಸ್ಕೆಟ್, ಕೋಟಿ ಕೋಟಿ ಹಣದ ಕಟ್ಟು ನೋಡಿ ಯಾಮಾರಿದ್ರೆ ಮುಗೀತು ನಿಮ್ಮ ಕತೆ.ಕೋಟಿ ಕೋಟಿ ಲೋನ್ ಬೇಕಾದವರೇ ಇವರ ಟಾರ್ಗೆಟ್ ನಕಲಿ ಚಿನ್ನದ ಬಿಸ್ಕೆಟ, ಖೋಟಾ ನೋಟು ತೋರಿಸಿ ಯಾಮಾರ್ಸ್ತಾರೆ ಜೋಕೆ.ಕಮಿಷನ್ ಹೆಸರಲ್ಲಿ ಅಸಲಿ ಹಣ ಪಡೆದು,  ಖೋಟಾ ನೋಟು ಸಾಲ ಕೊಡ್ತಾರೆ.ಏಜೆಂಟ್ ಗಳ ಮೂಲಕ ಲೋನ್ ಬೇಕಾದವರನ್ನ ಹುಡುಕಿ ಅಂತವರಿಗೆ ಮೋಸ ಮಾಡ್ತಾರೆ.ಆಫೀಸ್ ಹಾಗೆ ಎಂಫ್ಲಾಯ್ ಗಳ ಇಂಗ್ಲೀಷ್ ನೋಡಿ ಇದೊಂದು ಪ್ರತಿಷ್ಠಿತ ಲೋನ್ ಕಂಪನಿ ಅನ್ನೋ ನಂಬಿಕೆ ಬರುತ್ತೆ .ಇವನ ಆಫೀಸ್ ಟೇಬಲ್ ಮೇಲೆ ಇರುತ್ತೆ ಚಿನ್ನದ ರಾಶಿ, ಪಕ್ಕದಲ್ಲೇ ಕೋಟಿ ಕೋಟಿ ಹಣದ ಕಟ್ಟು ಇರುತ್ತೆ.ಲೋನ್ ಬೇಕಾದವರನ್ನ ಹುಡುಕಲು ಇವನ ಬಳಿ  ಬರೋಬ್ಬರಿ 20 ಜನ ಏಜೆಂಟ್ ಗಳು ಇದ್ದಾರೆ.ಲೋನ್ ಹೆಸರಲ್ಲಿ ವಂಚಿಸುತ್ತಿದ್ದ ಖತರ್ನಾಕ್ ಗಳು ಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಅತ್ತೀನ ಗ್ರೂಪ್ಸ್ ಎಂಬ ಕಂಪನಿ ನಡೆಸುತ್ತಿದ್ದ ಪ್ರವೀಣ್ ನಿಂದ ವಂಚನೆಯಾಗಿದ್ದು,ಕೋಟಿ ಗಟ್ಟಲೇ ಲೋನ್ ಬೇಕಾದವರನ್ನ ಏಜೆಂಟ್ ಗಳಿ ಆಫೀಸ್ ಗೆ ಕರೆದು ಕೊಂಡು ಬರ್ತಿದ್ದ .ಕೋಟಿ ಲೋನ್ ಗೆ ಲಕ್ಷ ರೂಪಾಯಿ ಕಮೀಷನ್ ಪಡೆದು ಖೋಟಾ ನೋಟು ಕೊಟ್ಟು ಆರೋಪಿಗಳು ಕಳುಹಿಸುತ್ತಿದ್ದರು.ಇಲ್ಲಿ ಹಣ ಎಣಿಸೋದು ಲೇಟಾಗುತ್ತೆ ಮನೆಯಲ್ಲಿ ಎಣಿಸಿ ಅಂತಾ ಸಾಗಿ ಹಾಕ್ತಿದ್ರೂ .ನೋಟಿನ ಕಟ್ಟಿನ ಮೇಲ್ಬಾಗದಲ್ಲಿ ಮಾತ್ರ ಓರಿಜನಲ್ ನೋಟು ಇಟ್ಟು ವಂಚನೆ ಮಾಡ್ತಿದ್ರು.ಅದು ಖೋಟಾ ನೋಟು ಅಂತಾ ತಿಳಿದು ವಾಪಸ್ಸು ಕೊಡೊದಕ್ಕೆ ಬಂದಾಗ ಅಸಲಿ ಮುಖ ರಿವೀಲ್ ಆಗ್ತಿತ್ತು.ನಾವು ಓರಿಜನಲ್ ನೋಟು ಕೊಟ್ಟಿದ್ದೀವಿ ನೀವೆ ಈಗ ನಕಲಿ ನೋಟು ಕೊಟ್ಟಿದ್ದೀರಾ ಅಂತಾ ಅವಾಜ್ ಹಾಕ್ತಿದ್ರು‌.
 
ಸಿಸಿಟಿವಿ ದೃಶ್ಯ ಇಟ್ಟುಕೊಂಡು ಕಮೀಷನ್ ಹಣ ಪಡೆದು ಅಸಾಮಿಗಳು ಮೋಸ ಮಾಡುತ್ತಿದ್ದರು.ಓರಿಜಿನಲ್ ಡಾಕ್ಯುಮೆಂಟ್ಸ್ ಗೊಸ್ಕರ ಕೊಟ್ಟ ಕಮೀಷನ್ ವಂಚಿತರು ವಾಪಸ್ಸು ಕೇಳ್ತಿದಿಲ್ಲ.ಕಮೀಷನ್ ವಾಪಸ್ಸು ಕೇಳಿದ್ರೆ ಬೌನ್ಸರ್ ಗಳನ್ನ ಬಿಟ್ಟು ಫುಲ್ ರೌಡಿಸಂ ಮಾಡಿಸ್ತಿದ್ರು.ನಕಲಿ ಚಿನ್ನದ ಮೊಬೈಲ್, ಗಾಗಲ್, ನಕಲಿ ಆಭರಣಗಳನ್ನ ತೊಟ್ಟು ಪ್ರವೀಣ್ ವಂಚಿಸುತ್ತಿದ್ದ .ನಮ್ಮಲ್ಲಿ ಚಿನ್ನ ಇದೆ ಅದನ್ನ ಕೂಡ ಕಮೀಷನ್ ಗೆ ಕೊಡ್ತೀವಿ ನೀವು ಅಡವಿಟ್ಟು ಹಣ ಪಡೆದು ಕೊಳ್ಳುವಂತೆ ಹೇಳಿ ಮೋಸ ಮಾಡ್ತಿದ್ದ. ಚಿನ್ನ ಪಡೆದು ಕಮೀಷನ್ ಹಣ ಕೊಟ್ಟು ಅಡವಿಡಲು ಹೋದಾಗ ನಕಲಿ ಅನ್ನೋದು ಬೆಳಕಿಗೆ ಬರುತ್ತಿತ್ತು.
 
ವಾಪಸ್ಸು ಕೊಡೋಕೆ ಬಂದಾಗ ರೌಡಿಗಳನ್ನ ಬಿಟ್ಟು ಹೆದರಿಸುತ್ತಿದ್ದ ಪ್ರವೀಣ್ ಮೂಲತಹ ತಮಿಳು ನಾಡಿನವನಾಗಿರುವ  10 ವರ್ಷದಿಂದ ಬೆಂಗಳೂರಲ್ಲಿ ವಾಸ ಮಾಡ್ತಿದ್ದ.ರಾಮಮೂರ್ತಿ ನಗರದಲ್ಲಿ ಮನೆ ಮತ್ತು ಆಫೀಸ್ ಮಾಡಿಕೊಂಡಿದ್ದ.ಬೇರೆಯವರಿಗೆ ಟೋಫಿ ಹಾಕಿ ಜಾಗ್ವರ್ ಕಾರ್ ನಲ್ಲೇ ಓಡಾಟ ಮಾಡ್ತಿದ್ದ .ಕೆ.ಜಿ ನಗರ ಠಾಣೆಯಲ್ಲಿ 15 ದಿನದ ಹಿಂದೆ ಈತನ ಮೇಲೆ ಪ್ರಕರಣ ದಾಖಲಾಗಿತ್ತು .ಆರೋಪಿ ಪ್ರವೀಣ್ ಸೇರಿ ಶರಣಂ ಹಾಗೂ ವಿಷ್ಣುವನ್ನ ಜಯನಗರ ಪೊಲೀಸರು ಬಂಧಿಸಿದ್ದಾರೆ.ಏಜೆಂಟ್ ಗಳಿಗಾಗಿ ಜಯನಗರ ಪೊಲೀಸರ ತೀವ್ರ ಶೋಧ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಡ್ ಸೈಡ್ ಬೈಕ್ ಪಾರ್ಕ್ ಮಾಡೋ ಸವಾರರೆ ಎಚ್ಚರ..!