Publish Date: Fri, 18 Jan 2019 (18:54 IST)
Updated Date: Fri, 18 Jan 2019 (18:56 IST)
ಹಾಲೋಬ್ರಿಕ್ಸ್ ನಿಂದ ನಿರ್ಮಿಸಿದ್ದ ಹಳೆಯ ಕಂಪೌಂಡ್ ಗೋಡೆ ಉರುಳಿ ಬಿದ್ದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.
ಕೆ.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೃಂದಾವನ ಬಡಾವಣೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಳೆದ ರಾತ್ರಿ 12 ಗಂಟೆ ಸುಮಾರಿನಲ್ಲಿ ಈ ಅವಘಡ ಸಂಭವಿಸಿದೆ. 8 ಅಡಿ ಎತ್ತರದ ಕಾಂಪೌಂಡ್ ಪಕ್ಕದಲ್ಲಿ ಆಂಧ್ರದಿಂದ ಬಂದಿದ್ದ ಕೂಲಿ ಕಾರ್ಮಿಕರು ಶೆಡ್ ಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದರು.
ಕಾಂಪೌಂಡ್ ಗೋಡೆ ವಾಲಿಕೊಂಡು ಗುಡಿಸಲುಗಳ ಮೇಲೆ ಬಿದ್ದಾಗ ಗಾಢ ನಿದ್ರೆಯಲ್ಲಿದ್ದ ಮಾರಿಯಮ್ಮ(60) ಸಾವನ್ನಪ್ಪಿದ್ದಾರೆ. ಸುರೇಶ್ ಹಾಗೂ ಶಾಂತಮ್ಮ ಎಂಬುವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಕೆ.ಆರ್.ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.