Publish Date: Fri, 18 Jan 2019 (18:40 IST)
Updated Date: Fri, 18 Jan 2019 (18:42 IST)
ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳ ಆರೋಗ್ಯ ಚೇತರಿಸಿಕೊಳ್ಳಲಿ ಅಂತಾ ಪ್ರಾರ್ಥಿಸಿ ಕೋಲಾರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀಗಳು ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸಿ ರೈತ ಸಂಘ ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರು ಕೋಲಾರ ನಗರದ ಅಧಿದೇವತೆ ಕೋಲಾರಮ್ಮ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,111 ತೆಂಗಿನಕಾಯಿ ಹೊಡೆದು ಪ್ರಾರ್ಥನೆ ಸಲ್ಲಿಸಿದರು.
ಲಕ್ಷಾಂತರ ಜನರಿಗೆ ಅನ್ನ ದಾಸೋಹ, ವಿದ್ಯಾದಾನ ಮಾಡಿ, ಬಡವರ ಜನರಿಗೆ ದಾರಿ ದೀಪವಾದ ಶ್ರೀಗಳು ಬೇಗ ಗುಣಮುಖರಾಗಲೇಂದು ಎಂದು ಪ್ರಾರ್ಥನೆ ಮಾಡಿದರು. ಇನ್ನು ಈ ವೇಳೆ ಕೇಂದ್ರ ಸರ್ಕಾರ ಶ್ರೀಗಳಿಗೆ ಭಾರತ ರತ್ನ ನೀಡಿ ಗೌರವಿಸಬೇಕೆಂದು ಆಗ್ರಹಿಸಿದರು.