Publish Date: Mon, 14 Jan 2019 (19:08 IST)
Updated Date: Mon, 14 Jan 2019 (19:09 IST)
ಗುಡ್ಡ ಕುಸಿದು ರಾಜ್ಯದ ಯೋಧರೊಬ್ಬರು ಹುತಾತ್ಮರಾದ ದುರ್ಘಟನೆ ಸಂಭವಿಸಿದೆ.
ಸಿಕ್ಕಿಂನಲ್ಲಿ ಗುಡ್ಡ ಕುಸಿದು ಬೆಳಗಾವಿ ಮೂಲದ ಯೋಧ ಹುತಾತ್ಮರಾಗಿದ್ದಾರೆ. ಯೋಧ ರೋಹಿತ ದೇವರ್ಡೆ (26) ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಆಡಿ ಗ್ರಾಮದ ನಿವಾಸಿಯಾಗಿದ್ದ ರೋಹಿತ್, 517 ಎ ಎಸ್ ಸಿ ಬಟಲಿಯಾನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
2014 ರಲ್ಲಿ ಸೇನೆ ಸೇರಿದ್ದ ಯೋಧ ರೋಹಿತ್, ಸಿಕ್ಕಿಂ ರಾಜ್ಯದ ಘನ್ ಟೋಕ್ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ ಸಾವು ಕಂಡಿದ್ದಾರೆ.
ಬಟಾಲಿಯನ್ ನಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ರೋಹಿತ್, ಮಿಲ್ಟ್ರಿ ವಾಹನದ ಮೇಲೆಯೇ ಗುಡ್ಡ ಕುಸಿದ ಕಾರಣದಿಂದ ಹುತಾತ್ಮರಾಗಿದ್ದಾರೆ.
ನಾಳೆ ಅಥವಾ ನಾಡಿದ್ದು ಸ್ವ ಗ್ರಾಮಕ್ಕೆ ಪಾರ್ಥಿವ ಶರೀರ ತರುವ ಸಾಧ್ಯತೆಯಿದೆ.