ಆತ್ಮಹತ್ಯೆಗೆ ಶರಣಾಗಿದ್ದ ಅಂಬಿ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ

ಶನಿವಾರ, 12 ಜನವರಿ 2019 (17:35 IST)
ಆತ್ಮಹತ್ಯೆಗೆ ಶರಣಾಗಿದ್ದ ಅಂಬಿ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಲಾಗಿದೆ. ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ರಿಂದ ಸಂತೈಸಿಸಿದ್ದಾರೆ.

ಮೃತ ಅಭಿಮಾನಿಗಳ ಮನೆಗೆ ತೆರಳಿ ಧೈರ್ಯ ತುಂಬಿದ್ದಾರೆ ಅಂಬಿ ಪತ್ನಿ, ಪುತ್ರ. 

ಮದ್ದೂರು ತಾಲೂಕಿನ ಹೊಟ್ಟೆಗೌಡನದೊಡ್ಡಿ ಗ್ರಾಮದ ತಮ್ಮಯ್ಯ, ಗೊರವನಹಳ್ಳಿ ಗ್ರಾಮದ ಸುರೇಂದ್ರ ಮನೆಗೆ  ಭೇಟಿ ನೀಡಿದರು.  

ಮೃತ ಅಂಬಿ ಅಭಿಮಾನಿಗಳ ಕುಟುಂಬ ಜೊತೆ ಮಾತನಾಡಿ ಧೈರ್ಯ ತುಂಬಿದ್ದಾರೆ ಅಂಬಿ ಕುಟುಂಬ ವರ್ಗದವರು.
ಅಂಬರೀಷ್ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ತಮ್ಮಯ್ಯ, ಸುರೇಂದ್ರ. ಮೃತ ಅಭಿಮಾನಿಗಳ  ಕುಟುಂಬಕ್ಕೆ ತಲಾ ಮುವತ್ತು ಸಾವಿರ ಧನ ಸಹಾಯ ಮಾಡಲಾಯಿತು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಇದ್ದರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 1 ಕೋಟಿ ಲಂಚಕ್ಕೆ ಬೇಡಿಕೆ: ಸಿಸಿಬಿ ಸಬ್ಇನ್ಸಪೆಕ್ಟರ್ ಸಸ್ಪೆಂಡ್