Select Your Language

Notifications

webdunia
webdunia
webdunia
webdunia

ಕೆಜಿಎಫ್ ತಾಲೂಕಿನಲ್ಲಿ ರಿಲೀಸ್ ಆಗದ ‘ಕೆಜಿಎಫ್-2’

ಕೆಜಿಎಫ್ ತಾಲೂಕಿನಲ್ಲಿ ರಿಲೀಸ್ ಆಗದ ‘ಕೆಜಿಎಫ್-2’
bangalore , ಗುರುವಾರ, 14 ಏಪ್ರಿಲ್ 2022 (20:15 IST)
ವಿಶ್ವಾದ್ಯಂತ ‘ಕೆಜಿಎಫ್ ಚಾಪ್ಟರ್ 2’  ಭರ್ಜರಿ ರಿಲೀಸ್ ಆಗಿದೆ. ಎಲ್ಲೆಡೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಕೆಜಿಎಫ್ ಕತೆಗೆ ಮೂಲವಾದ ಕೆಜಿಎಫ್ ತಾಲೂಕಿನಲ್ಲೇ  ಚಿತ್ರ ಪ್ರದರ್ಶನವಾಗುತ್ತಿಲ್ಲ. ಹಣದ ವಿಚಾರವಾಗಿ ಮಾತುಕತೆ ವಿಫಲವಾಗಿರುವ ಹಿನ್ನೆಲೆ ಚಿತ್ರವನ್ನು ರಿಲೀಸ್ ಮಾಡಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ವಿತರಕರು ,ಚಿತ್ರಮಂದಿರ ಮಾಲೀಕರ ಮಧ್ಯೆ ಮಾತು ಕತೆ ವಿಫಲವಾಗಿದ್ದು, ವಿತರಕರು ಹೆಚ್ಚು ಹಣಕ್ಕೆ ಡಿಮ್ಯಾಂಡ್ ಮಾಡಿದ ಹಿನ್ನೆಲೆಯಲ್ಲಿ ಚಿತ್ರಮಂದಿರದವರು ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದಾರೆ. ಅಷ್ಟೊಂದು ಹಣ ನೀಡಿ ಟಿಕೆಟ್ ಕೊಂಡು ಇಲ್ಲಿ KGF-2 ಸಿನಿಮಾ ನೋಡಲ್ಲ. ಹೀಗಾಗಿ ಕೆಜಿಎಫ್​ನಲ್ಲಿ KGF-2 ಸಿನಿಮಾ ರಿಲೀಸ್ ಮಾಡಿಲ್ಲ ಎಂದು ಚಿತ್ರಮಂದಿರದ ಮಾಲಿಕರು ಹೇಳಿದ್ದಾರೆ. ಹೀಗಾಗಿ ಸಮೀಪದ ಬಂಗಾರಪೇಟೆ ತಾಲೂಕಿನ ಚಿತ್ರಮಂದಿರಕ್ಕೆ ಹೋಗಿ ಅಭಿಮಾನಿಗಳು ಚಿತ್ರ ವೀಕ್ಷಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

'ಇದಕ್ಕೆಲ್ಲ ಹಣ, ಕಮಿಷನ್ ದಂಧೆ ಕಾರಣ'