Select Your Language

Notifications

webdunia
webdunia
webdunia
webdunia

'ಇದಕ್ಕೆಲ್ಲ ಹಣ, ಕಮಿಷನ್ ದಂಧೆ ಕಾರಣ'

'All this is due to money and commissions'
bangalore , ಗುರುವಾರ, 14 ಏಪ್ರಿಲ್ 2022 (20:13 IST)
ಶೇಕಡಾ 40 ರಷ್ಟು ಕಮಿಷನ್ ಆರೋಪ ಪ್ರಕರಣ ಬಳಿಕ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಪ್ರಕರಣದ
ಸಮಗ್ರ ತನಿಖೆ ಆಗಬೇಕು ಎಂದು ಆಮ್ಆದ್ಮಿ ಪಕ್ಷದ ಮುಖಂಡ ಭಾಸ್ಕರ ರಾವ್ ಹೇಳಿದ್ದಾರೆ. ಇಷ್ಟೆಲ್ಲಾ ಆದರೂ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡಿಲ್ಲ. ರಾಜೀನಾಮೆ ನೀಡೋದು ಅವರ ರಾಜಕೀಯ ವಿವೇಚನೆಗೆ ಬಿಟ್ಟದ್ದು. ಇವರಿಗೆಲ್ಲ ಜನ ತಕ್ಕಪಾಠ ಕಲಿಸ್ತಾರೆ, ಸರಿಯಾಗಿ ಉತ್ತರ ಕೊಡುತ್ತಾರೆ. ಎರಡು ಪಕ್ಷದವರಿಗೂ ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಐಷಾರಾಮಿ ಮನೆಗಳು, ಐಷಾರಾಮಿ ವಾಹನಗಳು ಎಲ್ಲಿಂದ ಬರುತ್ತವೆ? ಇದೆಲ್ಲಾ ಶೇಕಡಾ 40ರಷ್ಟು ಕಮಿಷನ್ ದಂಧೆಯಿಂದಲೇ ಬರುತ್ತವೆ. ನಾನು ಬಸ್ಸಲ್ಲಿ ನಿಂತು ಶಾಲೆಗೆ ಹೋದವನು. ರಾಜಕಾರಣಿಗಳ ಮಕ್ಕಳು ಪುಕ್ಸಟ್ಟೆ ಹಣದಿಂದ ಮಜಾ ಮಾಡೋದು. ಇದಕ್ಕೆಲ್ಲ ಹಣ, ಕಮಿಷನ್ ದಂಧೆಯೇ ಕಾರಣ. ಪಂಜಾಬ್, ದೆಹಲಿ ರೀತಿ ಕರ್ನಾಟಕದಲ್ಲಿ ಬದಲಾವಣೆಯಾಗಬೇಕು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ