Select Your Language

Notifications

webdunia
webdunia
webdunia
webdunia

ಕೆಜಿಎಫ್-‌2 ವೀಕ್ಷಿಸಿದ ಕನ್ನಡದ ಸ್ಟಾರ್‌ ಗಳು!

kgf-2 kgf yash sandalwood ಕನ್ನಡ ಚಿತ್ರರಂಗ ಕೆಜಿಎಫ್‌-೨ ಯಶ್
bengaluru , ಗುರುವಾರ, 14 ಏಪ್ರಿಲ್ 2022 (14:01 IST)

ಕೆಜಿಎಫ್-‌೨ ಹವಾ ಹೇಗಿದೆ ಅಂದರೆ ಅಭಿಮಾನಿಗಳನ್ನು ಮಾತ್ರವಲ್ಲ, ಕನ್ನಡ ಚಿತ್ರರಂಗದ ಸೆಲೆಬ್ರೆಟಿಗಳನ್ನು ಬಿಟ್ಟಿಲ್ಲ. ಅವರು ಕೂಡ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದರು ಎಂಬುದು ಮೊದಲ ದಿನವೇ ಸಾಬೀತಾಯಿತು.
ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಬಹುತೇಕ ಕಡೆ ಮಧ್ಯೆರಾತ್ರಿಯಿಂದಲೇ ಪ್ರದರ್ಶನ ಆರಂಭವಾಗಿದೆ. ಯಶ್ ಅಭಿಮಾನಿಗಳೇನೋ ಮಧ್ಯೆರಾತ್ರಿಯಿಂದಲೇ ಸಿನಿಮಾ ವೀಕ್ಷಿಸುತ್ತಿದ್ದಾರೆ. ಅವರ ಜತೆ ಕನ್ನಡದ ಅನೇಕ ಸೆಲೆಬ್ರಿಟಿಗಳು ಚಿತ್ರ ವೀಕ್ಷಣೆಗೆ ಬಂದಿರುವುದು ವಿಶೇಷ.
ಡಾ.ರಾಜ್ ಮೊಮ್ಮಕ್ಕಳಾದ ಯುವ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ನಿರ್ದೇಶಕರಾದ ಸುನಿ, ಪವನ್ ಒಡೆಯರ್, ನಟಿ ಆಶಾ ಭಟ್, ಕೆಜಿಎಫ್ ಚಿತ್ರದಲ್ಲಿ ನಟಿಸಿರುವ ಶ್ರೀನಿಧಿ ಶೆಟ್ಟಿ, ಹರೀಶ್ ರೈ, ಅರ್ಚನಾ, ಅಯ್ಯಪ್ಪ, ಅವಿನಾಶ್, ಗರುಡ ಹೀಗೆ ಸಾಕಷ್ಟು ಕಲಾವಿದರು ಊರ್ವಶಿ ಚಿತ್ರಮಂದಿರಕ್ಕೆ ಬಂದು ಮೊದಲ ಶೋ ವೀಕ್ಷಿಸಿದ್ದಾರೆ.
ಅಲ್ಲದೇ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ 72 ವರ್ಷದ ಕೃಷ್ಣಾಜಿರಾವ್ ಕೂಡ ತಮ್ಮ ಕುಟುಂಬ ಸಮೇತ ಸಿನಿಮಾ ವೀಕ್ಷಿಸಲು ತ್ರಿವೇಣಿ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಮೊದಲ ಭಾಗದಲ್ಲಿ ಇವರು ರಾಕಿ ರಕ್ಷಣೆಯಲ್ಲಿ ಗರುಡನ ಆಳುಗಳಿಂದ ಬಚಾವ್ ಆಗಿ ಬರುವ ಪಾತ್ರದಲ್ಲಿ ಅಭಿನಯಿಸಿದ್ದರು. ಅದು ಗಣಿಯಲ್ಲಿ ಕೆಲಸ ಮಾಡುವ ವೃದ್ಧನ ಪಾತ್ರವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಸ್ಕ್ರೀನ್ ಮೇಲೆ ಪುನೀತ್ ರಾಜ್ ಕುಮಾರ್! ಭಾವುಕರಾದ ಫ್ಯಾನ್ಸ್