Select Your Language

Notifications

webdunia
webdunia
webdunia
webdunia

ರಾಕಿಭಾಯ್ ರಾಕ್ಸ್‌: ಥಿಯೇಟರ್‌ ಗಳಲ್ಲಿ ತೂಫಾನ್‌ ಎಬ್ಬಿಸಿದ ಕೆಜಿಎಫ್-‌2

kgf kgf-2 yash ಯಶ್‌ ಕೆಜಿಫ್‌ ಕೆಜಿಎಫ್-‌೨
bengaluru , ಗುರುವಾರ, 14 ಏಪ್ರಿಲ್ 2022 (14:08 IST)
ಕನ್ನಡ ಚಿತ್ರರಂಗವನ್ನು ಜಾಗತಿಕ ಮಾರುಕಟ್ಟೆಗೆ ಕೆಜಿಎಫ್‌ ಪರಿಚಯಿಸಿದರೆ, ಕೆಜಿಎಫ್-‌೨ ಜಾಗತಿಕ ಮಟ್ಟದಲ್ಲಿ ಹೊಸ ಹವಾ ಎಬ್ಬಿಸಿದ್ದು, ಕರ್ನಾಟಕ ಅಲ್ಲದೇ ವಿವಿಧ ಭಾಷೆ ಹಾಗೂ ದೇಶಗಳಲ್ಲಿ ಕೂಡ ಹಬ್ಬದಂತೆ ಆಚರಿಸುತ್ತಿದ್ದಾರೆ.
ಕೆಜಿಎಫ್‌ ಬಿಡುಗಡೆ ನಂತರ ಸುಮಾರು 4 ವರ್ಷಗಳ ಕಾಯುವಿಕೆ ನಂತರ ಇಂದು ಬಿಡುಗಡೆ ಆದ ಕೆಜಿಎಫ್‌-೨ ಕರ್ನಾಟಕದಲ್ಲಿ ಹಬ್ಬದಂತೆ ಆಚರಿಸಲಾಗುತ್ತದೆ.
ಇನ್ನು ಚಿತ್ರ ಬಿಡುಗಡೆಯನ್ನು ಅಭಿಮಾನಿಗಳು ಹಾಗೂ ಕರುನಾಡಿನ ಜನತೆ ಹಬ್ಬದ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ವಿಶ್ವದಾದ್ಯಂತ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಕೆಜಿಎಫ್ ಬಿಡುಗಡೆಯಾಗಿದ್ದು. ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರು ಸಹ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ರಾಕಿಂಗ್ ಸ್ಟಾರ್ಗೆ ಬಹುಪರಾಕ್ ಎನ್ನುತ್ತಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ನಟ ಯಶ್ ಚಿತ್ರದ ಕುರಿತು ಮಾಹಿತಿಯನ್ನ ಹಂಚಿಕೊಂಡಿದ್ದರು. ಚಿತ್ರದಲ್ಲಿ ತಾಯಿಯೊಬ್ಬಳು ತನ್ನ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿರುತ್ತಾಳೆ ತಾನು ಅನುಭವಿಸಿದ ಕಷ್ಟಗಳನ್ನು ತನ್ನ ಮಗ ಅನುಭವಿಸಬಾರದು ಎಂದು ಬಯಸುವ ತಾಯಿಯ ಕಥೆ ಕೆ.ಜಿ.ಎಫ್ ಚಾಪ್ಟರ್-2.
ಮೊದಲ ಅವತರಣಿಕೆಯ ಹಾಗೆ ಎರಡನೇ ಅವತರಣಿಕೆಯೂ ಸಹ ಬೊಂಬಾಟ್ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರು ಸಹ ಪ್ರಶಾಂತ್ ಹಾಗೂ ಯಶ್ ಕಾಂಬಿನೇಷನ್ ಜೈ ಎಂದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಕೆ.ಜಿ.ಎಫ್ ಚಾಪ್ಟರ್ 2 ಇಂದು ಬಿಡುಗಡೆಯಾಗಿದೆ. ಬಹುನಿರೀಕ್ಷೀತ ಚಿತ್ರದಲ್ಲಿ ಯಶ್, ರವೀನಾ ಟಂಡನ್, ಸಂಜಯ್ ದತ್, ಅಚ್ಯುತ್ ಕುಮಾರ್ ಹಾಗೂ ಖ್ಯಾತನಾಮರು ನಟಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್-‌2 ವೀಕ್ಷಿಸಿದ ಕನ್ನಡದ ಸ್ಟಾರ್‌ ಗಳು!