Select Your Language

Notifications

webdunia
webdunia
webdunia
webdunia

ಕೆಜಿಎಫ್-‌2 ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ!

kgf kgf-2 yash tamil
bengaluru , ಗುರುವಾರ, 14 ಏಪ್ರಿಲ್ 2022 (14:25 IST)
ರಾಕೀಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ ಚಾಪ್ಟರ್2 ಚಿತ್ರಕ್ಕೆ ಪೈರಸಿ ಭೂತ ಬೆನ್ನತ್ತಿದೆ. ಚಿತ್ರ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಕಿಡಿಗೇಡಿಗಳು ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರಮಂದಿರದಲ್ಲಿ ಯಾರೂ ಸಹ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿಯಬೇಡಿ. ಚಿತ್ರದ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬೇಡಿ. ಎಲ್ಲಾದರೂ ಚಿತ್ರ ಪೈರಸಿಯಾಗಿರುವುದು ಕಂಡು ಬಂದರೆ ಕೂಡಲೇ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಮನವಿ ಮಾಡಿದ್ದರು.
ಚಿತ್ರಕ್ಕೆ ಕೋಟಿ ಕೋಟಿ ಬಂಡವಾಳವನ್ನ ಹಾಕಿದ್ದೇವೆ ದಯವಿಟ್ಟು ಚಿತ್ರವನ್ನು ಚಿತ್ರಮಂದಿರದಲ್ಲೇ ವೀಕ್ಷಿಸಿ. ಪೈರಸಿ ಕಾಟ ತಡೆಯಲು ಹೋಂಬಾಳೆ ಫೀಲ್ಮ್ಸ್‌ ತಂಡ ಸಿದ್ಧವಾಗಿದ್ದು, ಲಿಂಕ್‌ ಗಳನ್ನು ಡಿಲಿಟ್‌ ಮಾಡುತ್ತಿವೆ ಎಂದು ಹೇಳಿದ್ದರು.
ಇದೇ ವೇಳೆ ತಮಿಳಿನಲ್ಲಿ ಕೆಜಿಎಫ್-‌2 ಚಿತ್ರ ಟೆಲಿಗ್ರಾಂನಲ್ಲಿ ಅಪ್‌ ಲೋಡ್‌ ಮಾಡಲಾಗಿದೆ.  ಇದಕ್ಕೂ ಮುನ್ನ ಕನ್ನಡದ ರಾಬರ್ಟ್‌ ಚಿತ್ರ ಕೂಡ ಪೈರಸಿ ಕಾಟ ಎದುರಿಸಿತ್ತು. ಆದರೆ ಚಿತ್ರ ಥಿಯೇಟರ್‌ ನಲ್ಲಿ ನೋಡಿದಷ್ಟು ಮಜಾ ಕೊಡಲ್ಲ ಎಂಬುದು ಅಭಿಮಾನಿಗಳ ಅಭಿಪ್ರಾಯ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಭಾಯ್ ರಾಕ್ಸ್‌: ಥಿಯೇಟರ್‌ ಗಳಲ್ಲಿ ತೂಫಾನ್‌ ಎಬ್ಬಿಸಿದ ಕೆಜಿಎಫ್-‌2