Publish Date: Tue, 03 Mar 2020 (14:34 IST)
Updated Date: Tue, 03 Mar 2020 (14:36 IST)
ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿ ಬಿಜೆಪಿ ಶಾಸಕರು ಟೊಂಕಕಟ್ಟಿ ನಿಂತಿದ್ದಾರೆ.
ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಶಾಸಕ ಯತ್ನಾಳ್ ರ ಜೊತೆಗೆ ಬಹುತೇಕ ಬಿಜೆಪಿ ಶಾಸಕರು ಕಾಣಿಸಿಕೊಂಡು ಮಾತನಾಡಿ ಸಪೋರ್ಟ್ ಮಾಡಿದರು.
ಭಾರತ್ ಮಾತಾ ಕೀ ಜೈ ಅಂತ ಹೇಳೋಕೆ ಹಿಂದೆ ಮುಂದೆ ನೋಡ್ತಿದ್ದವರ ಬಾಯಲ್ಲಿ ಭಾರತ್ ಮಾತಾ ಕೀ ಜೈ ಅಂತ ಘೋಷಣೆಯನ್ನು ಕೂಗಿಸಿರೋ ಶಾಸಕ ಯತ್ನಾಳ್ ಹುಲಿ ಅಂತ ಬಿಜೆಪಿ ಸದಸ್ಯರು ಹೊಗಳಿದರು.
ಯತ್ನಾಳ್ ಮಾಡಿರುವುದು ಉತ್ತಮ ಕೆಲಸವಾಗಿದೆ. ಪ್ರತಿಯೊಬ್ಬರೂ ಭಾರತ್ ಮಾತಾ ಕೀ ಜೈ ಅಂತ ಹೇಳಲೇಬೇಕು ಅಂತ ಬಿಜೆಪಿ ಶಾಸಕರು ತಮ್ಮಷ್ಟಕ್ಕೆ ಮಾತನಾಡಿಕೊಳ್ಳುತ್ತಾ ಯತ್ನಾಳ್ ರಿಗೆ ಬೆಂಬಲ ಸೂಚಿಸಿದರು.