Select Your Language

Notifications

webdunia
webdunia
webdunia
webdunia

ದೊರೆಸ್ವಾಮಿ ವಿರುದ್ಧ ತನಿಖೆಯಾಗಲಿ ಎಂದು ಮತ್ತೆ ಅಬ್ಬರಿಸಿದ ಶಾಸಕ ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು , ಸೋಮವಾರ, 2 ಮಾರ್ಚ್ 2020 (21:03 IST)
ಬಜೆಟ್ ಅಧಿವೇಶನದ ಮೊದಲ ದಿನದ ಕಪಾಲ ಬಲಿಯಾದ ಬೆನ್ನಲ್ಲೇ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ನಾನು ಯಾವುದೇ ಕಾರಣಕ್ಕೂ ದೊರೆಸ್ವಾಮಿ ಹತ್ತಿರ ಕ್ಷಮೆ ಕೆಳೋದೇ ಇಲ್ಲ ಅಂತ ಕಡ್ಡಿ ತುಂಡುಮಾಡಿದಂತೆ ಶಾಸಕ ಯತ್ನಾಳ್ ಹೇಳಿದ್ದಾರೆ.

ದೊರೆಸ್ವಾಮಿ ಎಷ್ಟು ಹೋರಾಟ ಮಾಡಿದ್ದಾರೆ? ಅವರು ಮಾಡಿರೋ ಹೋರಾಟಗಳ ಬಗ್ಗೆ ತನಿಖೆಯಾಗಬೇಕು. ಬ್ರಿಟಿಷರ್ ಲಾಠಿ, ಬೂಟುಗಳ ಏಟು ತಿಂದಿದ್ದಾರಾ? ಯಾವ ಜೈಲಿಗೆ ಎಷ್ಟು ಬಾರಿ ಹೋಗಿದ್ದಾರೆ ಅಂತೆಲ್ಲ ಪ್ರಶ್ನೆ ಮಾಡಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಕೊಡುತ್ತೇನೆ. ಆದರೆ ನಕಲಿ ಹೋರಾಟಗಾರರಿಗೆ ಬೆಲೆ ಕೊಡೋದಿಲ್ಲ ಅಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಖಾಸಗಿ ವಾಹನದ ಮೇಲೆ ಈ ರೀತಿ ಬರೆಸಿದ್ರೆ ಹುಷಾರ್