Publish Date: Mon, 02 Mar 2020 (06:31 IST)
Updated Date: Mon, 02 Mar 2020 (06:33 IST)
ಬೆಂಗಳೂರು : ರೋಸ್ ವಾಟರ್ ಮುಖದ ಅಂದವನ್ನು ಹೆಚ್ಚಿಸುತ್ತವೆ. ಅದು ನೈಸರ್ಗಕ ಕ್ಲೆನ್ಸರ್ ನಂತೆ ಕೆಲಸ ಮಾಡುತ್ತವೆ. ಇದನ್ನು ಈ ರೀತಿ ಬಳಸಿದರೆ ನಿಮಗೆ ಹೆಚ್ಚು ಉಪಯೋಗಕಾರಿ.
ರೋಸ್ ವಾಟರ್ ನ್ನು ಹತ್ತಿಯಿಂದ ಅದ್ದಿ ಮುಖಕ್ಕೆ ಹಚ್ಚಿ ಧೂಳನೆಲ್ಲಾ ತೆಗೆಯಿರಿ. ಬಳಿಕ ½ ಚಮಚ ರೋಸ್ ವಾಟರ್ ಗೆ ಸ್ವಲ್ಪ ಹನಿಗಳಷ್ಟು ಗ್ಲಿಸರಿನ್ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಹೀಗೆ ಮಾಡಿದರೆ ತ್ವಚೆ ಕಾಂತಿಯುತವಾಗಿ ಹೊಳೆಯುತ್ತದೆ.
ರೋಸ್ ವಾಟರ್ ಗೆ 1ಚಮಚ ನಿಂಬೆರಸ ಮಿಕ್ಸ್ ಮಾಡಿ ಮೊಡವೆಗಳಿಗೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿದರೆ ಮೊಡವೆಗಳು ನಿವಾರಣೆಯಾಗುತ್ತವೆ.