Publish Date: Sun, 01 Mar 2020 (21:49 IST)
Updated Date: Sun, 01 Mar 2020 (21:51 IST)
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಶಾಸಕರ ಪರವಾಗಿ ಡಿಸಿಎಂ ಹಾಗೂ ಪಕ್ಷದ ಪ್ರಮುಖರು ಬ್ಯಾಟ್ ಬೀಸಲಾರಂಭಿಸಿದ್ದಾರೆ.
ಶಾಸಕ ಯತ್ನಾಳ್ ಅವರು ಕಾನೂನು ಬಾಹಿರ ಏನನ್ನೂ ಮಾತನಾಡಿಲ್ಲ. ಹೀಗಂತ ಡಿಸಿಎಂ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.
ಕಾನೂನು ಹಾಗೂ ಸಂವಿಧಾನದ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿಲ್ಲ. ವಿನಾಕಾರಣ ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿದೆ. ಸದನದಲ್ಲಿ ಚರ್ಚೆ ಮಾಡೋದನ್ನು ಬಿಟ್ಟು ಕಾಂಗ್ರೆಸ್ ಹೋರಾಟದ ಹಾದಿ ತುಳಿಯುತ್ತಿರೋದು ಸರಿಯಲ್ಲ ಅಂತ ಹೇಳಿದ್ದಾರೆ.