Select Your Language

Notifications

webdunia
webdunia
webdunia
webdunia

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಾಚಾನಾ? ಎಂದ ಬಿಜೆಪಿ ಶಾಸಕ

ರಮೇಶ್ ಕುಮಾರ

ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕೇಂದ್ರ ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ಗುಡುಗಿದ್ದಾರೆ.
 

ವಿಧಾನಸಭೆಯಲ್ಲಿ ಇರಲು ಶಾಸಕ ಯತ್ನಾಳ್ ನಾಲಾಯಕ್ ಅಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರೋ ಯತ್ನಾಳ್, ತತ್ವಾದರ್ಶ ಕಲಿಯೋ ಅವಶ್ಯಕತೆ ನನಗಿಲ್ಲ. ನನ್ನ ವಿರುದ್ಧ ಜನಪರ ಹೋರಾಟ, ನೀರಾವರಿ ಹೋರಾಟ ಮಾಡಿರೋದಕ್ಕೆ ಕೇಸ್ ಗಳಿವೆ. ಆದರೆ ಅತ್ಯಾಚಾರ, ಭೂ ಕಬಳಿಕೆ ಕೇಸ್ ಗಳಿಲ್ಲ. ನಾನು ಆರ್ ಎಸ್ ಎಸ್ ನವನು. ರಮೇಶ್ ಕುಮಾರ್ ಏನ್ ಮಾಡ್ತಾರೆ ಅಂತ ಗುಡುಗಿದ್ದಾರೆ.ಮಾಜಿ ಸ್ಪೀಕರ್ ರಮೇಶ್ ಎಷ್ಟು ಭೂಮಿಯನ್ನು ಕಬಳಿಕೆ ಮಾಡಿಕೊಂಡಿದ್ದಾರೆ ಅನ್ನೋದು ಎಲ್ರಿಗೂ ಗೊತ್ತಿದೆ. ಸತ್ಯಹರಿಶ್ಚಂದ್ರದ ಕುಟುಂಬದವರಂತೆ ಮಾತನಾಡ್ತಾರೆ. ಸಾಚಾ ಎಂಬಂತೆ ಪೋಸ್ ಕೊಡುತ್ತಾರೆ ಅಂತೆಲ್ಲ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದ್ದಾರೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಹದಾಯಿ ಗೆಜೆಟ್ : ಗೋವಾ ವಿರುದ್ಧ ತೊಡೆತಟ್ಟಿದ ರಾಜ್ಯ ಸರಕಾರ