Publish Date: Sat, 18 Jan 2020 (17:40 IST)
Updated Date: Sat, 18 Jan 2020 (17:42 IST)
ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗೆ ಕೇಂದ್ರ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಖಡಕ್ ವಾರ್ನಿಂಗ್ ನೀಡಿದ್ದಾರೆ.
ವಚನಾನಂದ ಸ್ವಾಮೀಜಿ ಮಾತ್ರವಲ್ಲ ಸ್ವಾಮೀಜಿಗಳು ಧರ್ಮದ ಕೆಲಸ, ಬಡವರ ಕೆಲಸ ಮಾಡಬೇಕು. ಆದರೆ ರಾಜಕೀಯವಾಗಿ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರೋ ಕೆಲಸ ಮಾಡಬಾರದು.
ಹೀಗಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಇನ್ನು ಮುಂದೆಯಾದರೂ ವಚನಾನಂದ ಸ್ವಾಮೀಜಿ ಸುಧಾರಿಸಿಕೊಳ್ಳಬೇಕು. ಇಲ್ಲದೇ ಹೋದರೆ ಎರಡ್ಮೂರು ತಿಂಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದ್ದಾರೆ.