Publish Date: Thu, 17 Oct 2019 (15:12 IST)
Updated Date: Thu, 17 Oct 2019 (15:15 IST)
ಬಿಜೆಪಿ ಶಾಸಕ ಹಾಗೂ ಮಾಜಿ ಕೇಂದ್ರ ಸಚಿವರಿಗೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಚೌಕಟ್ಟನ್ನು ಮೀರಿ ಯಾರೇ ನಡೆದುಕೊಂಡರೂ ಪಕ್ಷ ನೀಡೋ ನೋಟಿಸ್ ಗೆ ಉತ್ತರ ಕೊಡಲೇಬೇಕು. ಹೀಗಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ಕೊಟ್ಟಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಇರಲಿ ಅಥವಾ ಯಾರೇ ಇರಲಿ ಶೋಕಾಸ್ ನೋಟಿಸ್ ಗೆ ಉತ್ತರ ಕೊಡದಿದ್ದರೆ ದುರಹಂಕಾರಿ ಎನಿಸಿಕೊಳ್ಳುತ್ತಾರೆ.
ಪಕ್ಷದ ಶಿಸ್ತಿಗೆ ಒಳಪಟ್ಟು ನಡೆದುಕೊಳ್ಳಬೇಕು ಎಂದ ಅವರು, ನನ್ನಿಂದ ತಪ್ಪಾದರೂ ಅದಕ್ಕೆ ನಾನು ಹೈಕಮಾಂಡ್ ಗೆ ವಿವರಣೆ ನೀಡಲೇಬೇಕು ಎಂದಿದ್ದಾರೆ.