Publish Date: Wed, 16 Oct 2019 (11:10 IST)
Updated Date: Wed, 16 Oct 2019 (11:13 IST)
ಬೆಳಗಾವಿ : ಮುಂಬರುವ ಉಪಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, 15 ಕ್ಷೇತ್ರಗಳ್ಲೂ ಗೆಲುವು ಸಾಧಿಸಲು ಕಾಂಗ್ರೆಸ್, ಬಿಜೆಪಿ ಪಕ್ಷಗಳು ಪಣತೊಟ್ಟಿವೆ.
ಈ ಬಗ್ಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ‘ಮುಂಬರುವ ಉಪಚುನಾವಣೆ ನಮಗೆ ಮಹತ್ತರವಾದದ್ದು, 15 ಕ್ಷೇತ್ರಕ್ಕೂ ಒಬ್ಬೊಬ್ಬ ಉಸ್ತುವಾರಿ ಸಚಿವರನ್ನ ನೇಮಿಸಲಾಗುವುದು. ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ’ ಎಂದು ಹೇಳಿದ್ದಾರೆ.
‘ಸುಪ್ರೀಂ ತೀರ್ಪಿನ ನಂತರ ಅಭ್ಯರ್ಥಿಯ ಆಯ್ಕೆಗೆ ನಿರ್ಧಾರ ಮಾಡಲಾಗುವುದು. ಚುನಾವಣಾ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಭ್ಯರ್ಥಿಯ ಆಯ್ಕೆ ಮಾಡಲಾಗುವುದು . ತಿಂಗಳ ಅಂತ್ಯದೊಳಗೆ ಚುನಾವಣಾ ಪ್ರಚಾರಕ್ಕೂ ಚಾಲನೆ ನೀಡಲಾಗುವುದು ‘ ಎಂದು ಅವರು ತಿಳಿಸಿದ್ದಾರೆ.