ಸರಕಾರಿ ಅಧಿಕಾರಿಗಳ ಬ್ಯಾಗ್ ಒಳಗೆ ಕೈಹಾಕಿದ ಸಚಿವ

ಬುಧವಾರ, 16 ಅಕ್ಟೋಬರ್ 2019 (19:41 IST)
ಸರಕಾರಿ ಅಧಿಕಾರಿಗಳ ಬ್ಯಾಗ್ ನೊಳಗೆ ಕೈ ಹಾಕಿದ ರಾಜ್ಯದ ಸಚಿವರೊಬ್ಬರು ಪರಿಶೀಲನೆ ನಡೆಸಿದ್ದಾರೆ.

ಅಧಿಕಾರಿಗಳು, ಸಿಬ್ಬಂದಿಗಳ ಬ್ಯಾಗ್ ಪರೀಶೀಲನೆ ನಡೆಸಿದ್ದಾರೆ ಕಂದಾಯ ಸಚಿವ ಆರ್.ಅಶೋಕ್.

ಪ್ರತಿಯೊಂದು ಕೆಲಸಕ್ಕೂ ಲಂಚ ನೀಡಬೇಕು, ಸರಿಯಾದ ಸಮಯಕ್ಕೆ ಕೆಲಸ ಕಾರ್ಯಗಳು ನಡೆಯುತ್ತಿಲ್ಲ, ತಿಂಗಳಿಗೆ ಒಬ್ಬರೂ ತಹಶೀಲ್ದಾರ್ ಬರುತ್ತಾರೆ ಹಾಗೂ ಕಛೇರಿ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಮದ್ದೂರು ತಾಲ್ಲೂಕು ಕಛೇರಿಗೆ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಕಚೇರಿಯ ವಿವಿಧ ಶಾಖೆಗಳಿಗೆ ತೆರಳಿ ಸಿಬ್ಬಂದಿಗಳ ಬ್ಯಾಗ್, ಲಾಕರ್ ಟೇಬಲ್ ಗಳನ್ನು  ಪರಿಶೀಲನೆಗೆ ಸಚಿವರೇ ಸ್ವಯಂ ಮುಂದಾದ್ರು.

ಸಚಿವರು ತಪಾಸಣೆ ಮಾಡುತ್ತಿದ್ದಂತೆ ಅಧಿಕಾರಿ ಮತ್ತು ಸಿಬ್ಬಂದಿಗಳ ಎದೆಯಲ್ಲಿ ನಡುಕ ಉಂಟಾಗಿತ್ತು. ನಂತರ  ಸಾರ್ವಜನಿಕರು ಸಚಿವರ ಎದುರಲ್ಲಿ ದೂರುಗಳ ಸುರಿಮಳೆಯನ್ನೇ ಹರಿಸಿದರು.

ಇದೇ ವೇಳೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ , ಜಿಲ್ಲಾಧಿಕಾರಿ ವೆಂಕಟೇಶ್ , ಅಪರ ಜಿಲ್ಲಾಧಿಕಾರಿ ಯೋಗೇಶ್ ಇತರೇ  ಅಧಿಕಾರಿಗಳು ಹಾಜರಿದ್ದರು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸರಕಾರಿ ಲಾಟರಿ ಆರಂಭಕ್ಕೆ ಹೆಚ್ಚಿದ ಒತ್ತಡ