Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಸಮಾವೇಶಕ್ಕೆ ಟ್ರಾಫಿಕ್ ರೂಲ್ಸ್ ಗಾಳಿಗೆ ತೂರಿ ಎಂದ ಮಹಾರಾಷ್ಟ್ರ ಸಚಿವ

ಪ್ರಧಾನಿ ಮೋದಿ ಸಮಾವೇಶಕ್ಕೆ ಟ್ರಾಫಿಕ್ ರೂಲ್ಸ್ ಗಾಳಿಗೆ ತೂರಿ ಎಂದ ಮಹಾರಾಷ್ಟ್ರ ಸಚಿವ
ಮುಂಬೈ , ಶನಿವಾರ, 12 ಅಕ್ಟೋಬರ್ 2019 (09:53 IST)
ಮುಂಬೈ: ಮಹಾರಾಷ್ಟ್ರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಬರುವಾಗ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ಎಂದು ಮಹಾರಾಷ್ಟ್ರದ ಸಚಿವರೇ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.


ಜೈಗಾನ್ ನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲು ಬರುವಾಗ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆತರಲು ಸಂಚಾರಿ ನಿಯಮವನ್ನು ಉಲ್ಲಂಘಿಸಿದರೂ ಪರವಾಗಿಲ್ಲ ಎಂದು ಕಾರ್ಯಕರ್ತರಿಗೆ ಸಚಿವ ಪರಿನರಿ ಫ್ಯೂಕ್ ಹೇಳಿದ್ದಾರೆ.

‘ಅತೀ ಹೆಚ್ಚು ಸಂಖ್ಯೆಯಲ್ಲಿ ಬೈಕ್ ರ್ಯಾಲಿ ಬನ್ನಿ. ಒಂದು ವೇಳೆ ಪೊಲೀಸರು ತೊಂದರೆ ಕೊಟ್ಟರೆ ನನ್ನ ಹೆಸರು ಹೇಳಿ, ಆ ವಾಹನ ನನ್ನದು ಎನ್ನಿ. ಒಂದು ವೇಳೆ ಬೈಕ್ ನಲ್ಲಿ ಮೂವರು ಅಥವಾ ಐವರನ್ನು ಕರೆತಂದರೆ ಪೊಲೀಸರು ಬಂಧಿಸಿದರೆ ನಾನು ನಿಮ್ಮನ್ನು ಹೊರಗೆ ಕರೆತರುವೆ’ ಎಂದು ಫ್ಯೂಕ್ ಆದೇಶಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾ ಅಧ್ಯಕ್ಷರ ಭೇಟಿ ವೇಳೆ ಗಮನಸೆಳೆದ ಪ್ರಧಾನಿ ಮೋದಿ ವೇಷಭೂಷಣ