Select Your Language

Notifications

webdunia
webdunia
webdunia
webdunia

ಕ್ಯಾಮೆರಾ ಕಂಡರೆ ಬಿಜೆಪಿ ಸರಕಾರ ನಡುಗೋದ್ಯಾಕೆ?

ಕ್ಯಾಮೆರಾ ಕಂಡರೆ ಬಿಜೆಪಿ ಸರಕಾರ ನಡುಗೋದ್ಯಾಕೆ?
ಧಾರವಾಡ , ಶುಕ್ರವಾರ, 11 ಅಕ್ಟೋಬರ್ 2019 (18:23 IST)
ಕ್ಯಾಮೆರಾ ಕಂಡರೆ ಬಿಜೆಪಿಗರಿಗೆ ಏಕೆ ನಡುಕ? ಹೀಗೊಂದು ಪ್ರಶ್ನೆ ಬಲವಾಗಿ ಕೇಳಿಬರಲಾರಂಭಿಸಿದೆ.

ವಿಧಾನಸಭೆ ಕಲಾಪದಲ್ಲಿ ಖಾಸಗಿ ಮಾಧ್ಯಮಗಳನ್ನು ನಿಷೇಧ ಮಾಡಿರೋದನ್ನು ಖಂಡಿಸಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ವಿಧಾನ ಸಭೆ ಕಲಾಪದಲ್ಲಿ ಖಾಸಗಿ ಮಾಧ್ಯಮಗಳ ಕ್ಯಾಮರಾಗಳನ್ನು ನಿಷೇಧ ಮಾಡಿರುವುದನ್ನು ಖಂಡಿಸಿ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಟನೆ ಮಾಡಿ ತಹಸೀಲ್ದಾರ್ ಮೂಲಕ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನ ಪತ್ರಕರ್ತರ  ಭವನದಿಂದ ತಹಸೀಲ್ದಾರ್ ರ ಕಚೇರಿವರೆಗೆ ರ್ಯಾಲಿ ನಡೆಸಲಾಯಿತು. ಈ ವೇಳೆ ಕಲಾಪದಲ್ಲಿ ಖಾಸಗಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿರುವುದನ್ನು ಖಂಡಿಸಿ ರಾಜ್ಯ ಸರ್ಕಾರ ಮತ್ತು ಕಲಾಪದ ಸಭಾಧ್ಯಕ್ಷರ ವಿರುದ್ಧ ಪ್ರತಿಭಟನಾ ನಿರತ ಪತ್ರಕರ್ತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಮೇಲೆ ಸಭಾಧ್ಯಕ್ಷರು ತೆಗೆದುಕೊಂಡ ನಿರ್ಧಾರ ಖಂಡನೀಯ. ಈ ಮೂಲಕ ಕಲಾಪಗಳನ್ನು ಪಾರದರ್ಶಕತೆಯಿಂದ ದೂರ ಮಾಡುವ ಸಂಚು ರೂಪಿಸಲಾಗಿದೆ. ಈ ಹಿಂದೆ ಕಲಾಪಗಳಲ್ಲಿ ಸಚಿವರು ತೋರಿದ ಘಟನೆಗಳನ್ನು ಈ ಕಾಲದಲ್ಲಿ ನೆನಪಿಸಿಕೊಳ್ಳುವುದು ಸೂಕ್ತವಾಗಿದೆ.

ಅಲ್ಲದೇ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಮೂಲಕ ಸರ್ಕಾರ ಮತ್ತು ಜನರ ನಡುವಿನ ಸೇತುವೆಯನ್ನು ಹಾಳು ಮಾಡುವುದೇ ಆಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಮತ್ತು ಸಭಾಧ್ಯಕ್ಷರು ಖಾಸಗಿ ಮಾಧ್ಯಮಗಳ ಮೇಲೆ ಹೇರಿರುವ ನಿರ್ಬಂಧವನ್ನು ವಾಪಾಸ್ ಪಡೆದು ಮೊದಲಿನಂತೆ ಕಲಾಪಗಳ ದೃಶ್ಯಗಳನ್ನು ಸೆರೆ ಹಿಡಿಯಲು ಅವಕಾಶವನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಕೋಟೆ ನಾಡಲ್ಲಿ ತುಂಬಿದ ವಾಣಿವಿಲಾಸ ಜಲಾಶಯ